ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ₹ 1,60,32,000/- ಮೌಲ್ಯದ ಬಂಗಾರ, ಬೆಳ್ಳಿ ವಶಕ್ಕೆ, 43 ಖದೀಮರು ಅಂದರ್

ವಿಜಯಪುರ: ಗಾಂಧಿಚೌಕ, ಗೋಲಗುಂಬಜ್, ಎಪಿಎಮ್‌ಸಿ, ಆದರ್ಶನಗರ ಹಾಗೂ ಜಲನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಚರಣೆ ನಡೆಸಿದ ವಿಜಯಪುರ ಪೊಲೀಸರು ₹ 1,60,32,000/- ಮೌಲ್ಯದ ಬಂಗಾರ, ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.

ನಗರ ಉಪ-ವಿಭಾಗದ ವ್ಯಾಪ್ತಿಯ ಠಾಣೆಗಳಲ್ಲಿ 2025 ನೇ ಸಾಲಿನಲ್ಲಿ ದಾಖಲಾದ ಒಟ್ಟು 17 ಪ್ರಕರಣಗಳಲ್ಲಿ 28 ಜನ ಆರೋಪಿಗಳನ್ನು ಮತ್ತು 2026 ನೇ ಸಾಲಿನಲ್ಲಿ ದಾಖಲಾದ ಒಟ್ಟು 13 ಪ್ರಕರಣಗಳಲ್ಲಿ 15 ಜನ ಆರೋಪಿಗಳನ್ನು ಬಂಧಿಸಿ, ಆರೋಪಿತರಿಂದ ಒಟ್ಟು ₹. 1,60,32,000/- ಮೌಲ್ಯದ ಬಂಗಾರ, ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೂ ಇದೇ ವೇಳೆ ಬೆಳ್ಳಿ ಬಂಗಾರ ಸೇರಿದಂತೆ ವಿವಿಧ ವಸ್ತುಗಳನ್ನು ಕಳೆದು ಕೊಂಡವರಿಗೆ ಆರೋಪಿತರಿಂದ ಜಪ್ತಿ ಮಾಡಿರುವ ಬೆಳ್ಳಿ ಬಂಗಾರವನ್ನು ಹಸ್ತಾಂತರಿಸಲಾಯಿತು.

Edited By : Somashekar
PublicNext

PublicNext

24/04/2026 03:46 pm

Cinque Terre

15.83 K

Cinque Terre

0