ಮುಂಡರಗಿ: ಭಾರೀ ಮಳೆ ಗಾಳಿಗೆ ಕಟ್ಟಡವೊಂದರ ಮೇಲಿದ್ದ ಜಿಯೊ ಮೊಬೈಲ್ ಟವರ್ ಮುರಿದು ಬಿದ್ದು ದೊಡ್ಡ ದುರಂತವೊಂದು ತಪ್ಪಿದ ಘಟನೆ ನಡೆದಿದೆ.
ಪಟ್ಟಣದ ಜಾಗೃತ್ ವೃತ್ತದ ಕಟ್ಟಡದ ಮೇಲೆ ಅನೇಕ ವರ್ಷಗಳಿಂದ ಇದ್ದ ಮೊಬೈಲ್ ಟವರ್ ಗಾಳಿಯ ರಭಸಕ್ಕೆ ನೆಲಕ್ಕೆ ಉರುಳಿದೆ. ಭಾರೀ ಸದ್ದಿಗೆ ಸ್ಥಳೀಯರು ಆತಂಕಗೊಂಡು ಹೊರಗೆ ಓಡಿ ಬಂದಿದ್ದಾರೆ. ಜಾಗೃತ್ ವೃತ್ತದಲ್ಲಿ ಮೀನು ಮಾರುಕಟ್ಟೆ ಸೇರಿದಂತೆ ಇನ್ನಿತರ ಅಂಗಡಿಗಳಿದ್ದು, ಜನನಿಬಿಡ ಪ್ರದೇಶ ಇದಾಗಿದೆ. ಇದರಿಂದ ಅಕ್ಕಪಕ್ಕದ ಕಟ್ಟಡ ಹಾಗೂ ವಾಹನಗಳು ಹಾನಿಗೊಳಗಾಗಿದ್ದು, ಘಟನೆಯಿಂದ ಸುತ್ತಮುತ್ತಲಿನ ನಿವಾಸಿಗಳಲ್ಲೂ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
PublicNext
27/04/2026 10:47 pm
LOADING...