ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಹಿಂದಿ ಹಾರ್ಟ್ ಲ್ಯಾಂಡ್‌ಗೆ ಕೇಂದ್ರ ಸರ್ಕಾರ ಹೆಚ್ಚು ಪ್ರಾಮುಖ್ಯತೆ!

ಹಾವೇರಿ : ಮಹಿಳಾ ಮೀಸಲಾತಿ ಮಸೂದೆ ಕುರಿತ ರಾಜಕೀಯ ಕಾವು ಹೆಚ್ಚಾಗಿದ್ದು, ಹಾವೇರಿಯಲ್ಲಿ ಕೆಪಿಸಿಸಿ ವಕ್ತಾರೆ ಸ್ವಾತಿ ಚಂದ್ರಶೇಖರ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮಹಿಳಾ ರಾಜಕಾರಣದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ ಸ್ವಾತಿ ಚಂದ್ರಶೇಖರ್, "ಜಿ.ಎಸ್. ಶಿವರುದ್ರಪ್ಪ ಅವರ ಸಾಲುಗಳನ್ನು ಮೊದಲು ಮನನ ಮಾಡಿಕೊಳ್ಳಲಿ. 'ಸ್ತ್ರೀ' ಅಂದರೆ ಅಷ್ಟೇ ಸಾಕು ಎಂದು ಗೆಲ್ಲದ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವ ರಾಜಕಾರಣವೇಕೆ? ಮಹಿಳೆಯರನ್ನು ಕೇವಲ ರಾಜಕೀಯ ದಾಳವಾಗಿ ಬಳಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, "ಮುಂದೆ 543 ಕ್ಷೇತ್ರಗಳಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಲಿ" ಎಂದು ಆಗ್ರಹಿಸಿದರು.

ದಕ್ಷಿಣ ಭಾರತಕ್ಕೆ ಅನ್ಯಾಯ: ಹಿಂದಿ ಹಾರ್ಟ್‌ಲ್ಯಾಂಡ್‌ಗೆ ಪ್ರಾಮುಖ್ಯತೆ

ಈ ಹೊಸ ಮಸೂದೆಯು ದಕ್ಷಿಣ ಭಾರತಕ್ಕೆ ಅನ್ಯಾಯ ಎಸಗುವ ಉದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ ಸ್ವಾತಿ ಚಂದ್ರಶೇಖರ್, "ಹಿಂದಿ ಹಾರ್ಟ್ ಲ್ಯಾಂಡ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಉದ್ದೇಶದಿಂದಲೇ ಈ ಮಸೂದೆಯನ್ನು ರೂಪಿಸಲಾಗಿದೆ" ಎಂದು ಕಿಡಿಕಾರಿದರು. ಇಂತಹ ಮಸೂದೆಗಳನ್ನು ದೇಶದ ಮಹಿಳೆಯರು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Edited By : Shivu K
PublicNext

PublicNext

28/04/2026 10:53 pm

Cinque Terre

23.41 K

Cinque Terre

0

ಸಂಬಂಧಿತ ಸುದ್ದಿ