ಸಮಾಜಕ್ಕೆ ಉತ್ತಮ ಸಂದೇಶ ನೀಡುವ “ಧೃತಿ” ಚಿತ್ರ ಮೇ 8 ರಂದು ಬಿಡುಗಡೆಯಾಗಲಿದೆ. ಉದ್ಯಮಿ ಜಗದೀಶ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ.
ಚಿಕ್ಕಂದಿನಿಂದಲೇ ನಿರ್ದೇಶಕರಾಗುವ ಕನಸು ಕಂಡಿದ್ದ ಜಗದೀಶ್, ಈ ಚಿತ್ರದ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಆರು ವರ್ಷಗಳ ಹಿಂದೆ ಆರಂಭವಾದ ಈ ಚಿತ್ರದ ಸ್ಕ್ರಿಪ್ಟ್ ಕೆಲಸ, ಆರಂಭದಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಿಸುವ ಯೋಜನೆಯಿತ್ತು. ನಂತರ ಪತ್ನಿ ಮತ್ತು ಸ್ನೇಹಿತರ ಸಹಕಾರದಿಂದ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡಲಾಯಿತು. ಮಧ್ಯದಲ್ಲಿ ಛಾಯಾಗ್ರಾಹಕರು ವಿಧಿವಶರಾದ ಕಾರಣ, ಜಗದೀಶ್ ತಾವೇ ಛಾಯಾಗ್ರಹಣದ ಜವಾಬ್ದಾರಿ ಹೊತ್ತರು.
ಚಿತ್ರವು ಮಹಿಳೆಯರ ಮೇಲೆ ನಡೆಯುವ ಶೋಷಣೆ ಮತ್ತು ಅದಕ್ಕೆ ಪರಿಹಾರವನ್ನು ತೋರಿಸುತ್ತದೆ. ಪ್ರಶಾಂತ್ ನಾಯಕನಾಗಿ, ಆಂಚಲ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಹಲವಾರು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿವೆ. ಪ್ರಸನ್ನ ಕುಮಾರ್ ಅವರ ಸಂಗೀತ ಚಿತ್ರದ ವಿಶೇಷ ಆಕರ್ಷಣೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ಮಾಣ ಜಗದೀಶ್ ಅವರದೇ.
ನಟಿ ಆಂಚಲ್, ತಮ್ಮ ಪಾತ್ರವು ಸಂಕಷ್ಟಗಳ ನಡುವೆ ಧೈರ್ಯದಿಂದ ಎದುರಿಸುವ “ಧೃತಿ” ಎಂಬ ಹೆಸರಿನ ಪಾತ್ರ ಎಂದು ಹೇಳಿದರು. ನಟ ಪ್ರಶಾಂತ್, ತಾನು ಬಯಸಿದ ರೀತಿಯ ಪಾತ್ರದಲ್ಲೇ ಚಿತ್ರರಂಗ ಪ್ರವೇಶಿಸಿರುವುದಾಗಿ ಸಂತೋಷ ವ್ಯಕ್ತಪಡಿಸಿದರು.
PublicNext
29/04/2026 11:01 am
LOADING...