ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಲರಾಮ' ಟೀಸರ್ ಲಾಂಚ್ -ಚಿತ್ರದ ಬಗ್ಗೆ ತಂಡ ಹೇಳಿದ್ದೇನು?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬಲರಾಮ' ಚಿತ್ರದ ಟೀಸರ್ ಅಬ್ಬರ ಜೋರಾಗಿದೆ. ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಚಿತ್ರತಂಡ, ಸಿನಿಮಾ ಬಗ್ಗೆ ತಮ್ಮ ಸಂತಸ ಮತ್ತು ನಿರೀಕ್ಷೆಗಳನ್ನು ಹಂಚಿಕೊಂಡಿದೆ.

ನಿರ್ದೇಶಕ ಕೆ.ಎಂ. ಚೈತನ್ಯಮಾತನಾಡಿ, "ವಿನೋದ್ ಪ್ರಭಾಕರ್ ಅವರನ್ನು ಈ ಹಿಂದೆ ನೋಡಿರದ ರಗಡ್ ಅವತಾರದಲ್ಲಿ ತೋರಿಸಿದ್ದೇವೆ. ಸಿನಿಮಾದಲ್ಲಿ ಕೇವಲ ಆಕ್ಷನ್ ಮಾತ್ರವಲ್ಲದೆ, ಗಟ್ಟಿಯಾದ ಕಥೆಯೂ ಇದೆ" ಎಂದರು.

ನಾಯಕ ವಿನೋದ್ ಪ್ರಭಾಕರ್ ಈ ಚಿತ್ರದ ಮೇಕಿಂಗ್ ಮತ್ತು ನನ್ನ ಪಾತ್ರ ನನಗೆ ಬಹಳ ತೃಪ್ತಿ ನೀಡಿದೆ. ಟೀಸರ್‌ನಲ್ಲಿ ನೀವು ನೋಡಿರುವುದು ಕೇವಲ ಸ್ಯಾಂಪಲ್ ಅಷ್ಟೇ, ಸಿನಿಮಾದಲ್ಲಿ ಇನ್ನೂ ಹೆಚ್ಚಿನ ಹೈ-ವೋಲ್ಟೇಜ್ ದೃಶ್ಯಗಳಿವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

ಇನ್ನು ನಿರ್ಮಾಪಕ ಶ್ರೇಯಸ್ ಜಯರಾಮ್ "ಪದ್ಮಾವತಿ ಫಿಲಂಸ್ ಅಡಿಯಲ್ಲಿ ಗುಣಮಟ್ಟದ ಸಿನಿಮಾ ನೀಡಬೇಕೆಂಬ ನಮ್ಮ ಕನಸಿಗೆ 'ಬಲರಾಮ' ರೂಪ ಸಿಕ್ಕಿದೆ. ತಾಂತ್ರಿಕವಾಗಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ" ಎಂದು ಹರ್ಷ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ, ಖಡಕ್ ಡೈಲಾಗ್‌ಗಳು ಮತ್ತು ಫೈಟ್ಸ್‌ಗಳ ಮೂಲಕ ಟೀಸರ್ ಈಗ ಸಿನಿರಸಿಕರ ನಿದ್ದೆ ಗೆಡಿಸಿದೆ.

Edited By :
PublicNext

PublicNext

29/04/2026 12:24 pm

Cinque Terre

30 K

Cinque Terre

0