ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: 45 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಶಾಸಕ ಕೋನರಡ್ಡಿ

ಅಣ್ಣಿಗೇರಿ: ನಗರದ ಹೊಸಪೇಟಿ ಓಣಿಯ ನೂರಾನಿ ಮಸಜೀದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ಹಾಗೂ ಕೆರೆ ಓಣಿಯ ಮಸಜೀದ(ಸುನ್ನಿ) ಹತ್ತಿರ 25 ಲಕ್ಷ ರೂಗಳ ಸಮುದಾಯ ಭವನ ಒಟ್ಟು ಎರಡು ಸಮುದಾಯ ಭವನ ಸೇರಿ 45 ಲಕ್ಷ ರೂಗಳಲ್ಲಿ ನಿರ್ಮಾಣವಾಗಲಿರುವ ಸಮುದಾಯ ಭವನದ ಕಟ್ಟಡದ ಭೂಮಿ ಪೂಜೆಯನ್ನು ಕಮಲಾಪೂರ ದರ್ಗಾದ ಪೀರಾ ಸಜ್ಜಾದ ಹುಸೇನ ಖಾದ್ರಿ ಹಾಗೂ ಅಸ್ಕರ್ ಅಲಿ ಪೀರವಾಲೆ ಪೂಜ್ಯರುಗಳ ಉಪಸ್ಥಿತಿಯಲ್ಲಿ ಶಾಸಕ ಕೋನರೆಡ್ಡಿ ನೆರವೇರಿಸಿದರು.

ನಂತರ ಮಾತನಾಡಿ,ಎರಡು ಸಮುದಾಯ ಭವನಗಳನ್ನು ಓಣಿಯ ಗುರು ಹಿರಿಯರು ಹಾಗೂ ಕಮೀಟಿ ಸದಸ್ಯರುಗಳ ಉಸ್ತುವಾರಿಯಲ್ಲಿ ಕಾಮಗಾರಿಯನ್ನು ಪೂರ್ಣಗೂಳಿಸಲು ತಿಳಿಸಿ, ಈಗಾಗಲೇ ಎಲ್ಲ ಸಮುದಾಯಗಳಿಗೆ ಅನುದಾನ ನೀಡಿದ್ದು,ಅದರಂತೆ ಅಲ್ಪಸಂಖ್ಯಾತರಿಗೂ ಅನುದಾನವನ್ನು ಬಿಡುಗಡೆಗೂಳಿಸಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಣ್ಣಿಗೇರಿ ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ ಸೇರಿದಂತೆ ಸದಸ್ಯರಾದ ಬಾಬಾಜಾನ ಮುಲ್ಲಾನವರ, ಹಸನಸಾಬ ಸುಂಕದ, ಮಾರುತಿ ಕಾಳೆ, ಹಸನಸಾಬ ಗಡ್ಡದ, ಎರಡು ಆಡಳಿತ ಮಂಡಳಿಯ ಸದಸ್ಯರುಗಳಾದ ಅಮೀರುದ್ದೀನ ಮುಲ್ಲಾ, ಶೌಕತ ಅಲಿ ಜಂಗಲನಾಯ್ಕ, ಇರ್ಪಾನ ದೊಡಮನಿ, ಮಾಬುಸಾಬ ಖುದ್ದಣ್ಣವರ, ಮರ್ದಾನಸಾಬ ಡಾಲಾಯತ, ಸಲೀಮ ಸದರಬಾಯಿ, ಮುನೀರ ದೊಡಮನಿ, ಅಸ್ಪಕ್ ಇಸ್ಮಾಯಿಲ್, ಶಫೀ ಕಳಸಾಪೂರ, ಬಾಬುಸಾಬ ಠಾಣೇದ, ರಾಜೇಸಾಬ ದೊಡಮನಿ, ರಫೀಕ ಹಿರೇನಾಯ್ಕರ, ಶರೀಫ ಕರಬುಡ್ಡಿ, ನಬೀಸಾಬ ಜಂಗಲನಾಯ್ಕ, ಜೈಲಾನಿ, ಕರಬುಡ್ಡಿ, ಮುನ್ನಾ ಅರಬರ, ಮಾಬುಸಾಬ ಠಾಣೇದ, ಮಹಾದೇವಪ್ಪ ದಿಡ್ಡಿ, ದಾವಲಸಾಬ ದರವಾನ, ಸಿದ್ದಪ್ಪ ಕೋಳಿವಾಡ ಸೇರಿದಂತೆ ಇತರರು ಇದ್ದರು.

Edited By : PublicNext Desk
Kshetra Samachara

Kshetra Samachara

30/04/2026 09:27 pm

Cinque Terre

53.67 K

Cinque Terre

1

ಸಂಬಂಧಿತ ಸುದ್ದಿ