ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಹೆದ್ದಾರಿಯಲ್ಲಿ ಕಾರು ದಹನ, ಇಡೀ ಕುಟುಂಬ ಮರಣ - ಫಲ ಕೊಡಲಿಲ್ಲ ವೈಷ್ಣೋದೇವಿ ದರ್ಶನ

ಜೈಪುರ/ಅಲ್ವಾರ್: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸಜೀವ ದಹನವಾಗಿರುವ ಮನಕಲಕುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಸಂಭವಿಸಿದೆ.

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಚೈನ್‌ಪುರ ಗ್ರಾಮದ ಕುಟುಂಬವೊಂದು ಜಮ್ಮುವಿನ ವೈಷ್ಣೋದೇವಿ ದರ್ಶನ ಮುಗಿಸಿ ತಮ್ಮ ಊರಿಗೆ ಮರಳುತ್ತಿತ್ತು. ಬುಧವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಅಲ್ವಾರ್‌ನ ಎಸ್‌ಎಸ್‌ಬಿ ತರಬೇತಿ ಕೇಂದ್ರದ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ತಾಗಿ ಗ್ಯಾಸ್ ಸೋರಿಕೆಯಾಗಿ (Gas Leak) ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದ್ದರಿಂದ ಒಳಗೆ ಕುಳಿತಿದ್ದವರಿಗೆ ಹೊರಬರಲು ಸಾಧ್ಯವಾಗಲಿಲ್ಲ.

ಈ ಬೆಂಕಿ ಅನಾಹುತದಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಇಬ್ಬರು ಪುಟ್ಟ ಹೆಣ್ಣುಮಕ್ಕಳು ಸಜೀವ ದಹನವಾಗಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಕಾರಿನ ಕಿಟಕಿ ಗಾಜನ್ನು ಒಡೆದು ಹೊರಜಿಗಿದ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ, ಆತನಿಗೆ ಶೇ. 80ರಷ್ಟು ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಜೈಪುರದ ಎಸ್‌ಎಂಎಸ್ (SMS) ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಕಾರಿನಲ್ಲಿದ್ದ ಸಿಎನ್‌ಜಿ (CNG) ಕಿಟ್‌ನಿಂದ ಅನಿಲ ಸೋರಿಕೆಯಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಚೌಧರಿ ಅವರ ಪ್ರಕಾರ, ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಅಗ್ನಿಶಾಮಕ ದಳ ಸ್ಥಳಕ್ಕೆ ಬರುವಷ್ಟರಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮೃತದೇಹಗಳನ್ನು ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದು, ಕೇವಲ ಅಸ್ಥಿಪಂಜರಗಳು ಮಾತ್ರ ಪತ್ತೆಯಾಗಿವೆ. ಡಿಎನ್‌ಎ (DNA) ಪರೀಕ್ಷೆಯ ಮೂಲಕ ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ತಮ್ಮ ಆರಾಧ್ಯ ದೈವದ ದರ್ಶನ ಪಡೆದು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಕುಟುಂಬಕ್ಕೆ ವಿಧಿ ಇಂತಹ ಕಠೋರ ಅಂತ್ಯ ಬರೆದಿದ್ದು ಇಡೀ ಗ್ರಾಮದಲ್ಲಿ ಶೋಕ ಸಾಗರವನ್ನುಂಟು ಮಾಡಿದೆ.

Edited By : Nagaraj Tulugeri
PublicNext

PublicNext

30/04/2026 10:33 pm

Cinque Terre

6.69 K

Cinque Terre

0

ಸಂಬಂಧಿತ ಸುದ್ದಿ