ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಟ್ಟು ಶ್ರೀ ಕೋರ್ದಬ್ಬು ಹಾಗೂ ತನ್ನಿಮಾನಿಗ ದೈವಗಳ ವೈಭವದ ನೇಮೋತ್ಸವ

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಮಟ್ಟು ಶ್ರೀ ಕೋರ್ದಬ್ಬು-ತನ್ನಿಮಾನಿಗ ದೈವಸ್ಥಾನದಲ್ಲಿ ಶ್ರೀ ಕೋರ್ದಬ್ಬು ಹಾಗೂ ತನ್ನಿಮಾನಿಗ ದೈವಗಳ ನೇಮೋತ್ಸವ ವೈಭವದಿಂದ ನಡೆಯಿತು.

ಏ.30 ಗುರುವಾರ ಮಧ್ಯಾಹ್ನ ಗಂಟೆ 12.15ಕ್ಕೆ : ಚಪ್ಪರ ಆರೋಹಣ,ಮಧ್ಯಾಹ್ನ ಗಂಟೆ 1.00ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ , ಸಂಜೆ 6ಕ್ಕೆ ಶ್ರೀ ದೈವಗಳ ಭಂಡಾರ ಇಳಿಯುವುದು, ರಾತ್ರಿ 10ಕ್ಕೆ: ಶ್ರೀ ಕೋರ್ದಬ್ಬ - ತನ್ನಿಮಾನಿಗ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭ ಗುತ್ತಿನಾರ್ ಸುಧಾಕರ ಶೆಟ್ಟಿ ದೆಪ್ಪುಣಿ ಗುತ್ತು, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ದಿನೇಶ್ ಅಮೀನ್ ಮಟ್ಟು, ವಿವೇಕ್ ಶೆಟ್ಟಿ ಬಟಾರ ಬಾಳಿಕೆಮನೆ, ಶಿವರಾಮ ಶೆಟ್ಟಿ ಹೊಸಮನೆ, ಶ್ರೀನಿವಾಸ ಪೂಜಾರಿ ತೆಂಕುಮನೆ, ಸಮಿತಿ ಅಧ್ಯಕ್ಷ ಹರೀಶ್ ಕರ್ಕೇರ,,ಹರಿಶ್ಚಂದ್ರ ಸುವರ್ಣ ಮೂಡು ಮನೆ ಮಟ್ಟು, ಗೋವಾ, ಪ್ರೇಮಾನಂದ ಪೂಜಾರಿ, ಧನಂಜಯ ಮಟ್ಟು, ಉದಯ ಅಮೀನ್ ಪೂಜಾರಿ, ಪ್ರವೀಣ್ ಬರ್ಕೆ ಮನೆ, ಅಶೋಕ್ ಕೋಟ್ಯಾನ್, ವಿಶ್ವೇಂದ್ರ ಅಮೀನ್, ಶೇಖರ ಪೂಜಾರಿ ಅಂಗಡಿ ತೋಟ, ಶಶೀಂದ್ರ ಸಾಲ್ಯಾನ್ ಮುಂಬೈ, ವಿಶ್ವನಾಥ ಅಮೀನ್, ಯೋಗೀಶ್ ಮೂಡುಮನೆ,, ಅಜಯ್ ಶೆಟ್ಟಿ, ರಮೇಶ್ ಸುವರ್ಣ ಪಡುಮನೆ, ರೇಷ್ಮಾ ರವಿರಾಜ್, ದಯಾನಂದ ಮಟ್ಟು ಮತ್ತಿತರರು ಉಪಸ್ಥಿತರಿದ್ದರು.

ಮೇ 1 ಬೆಳಿಗ್ಗೆ ಶ್ರೀ ಪಂಜುರ್ಲಿ ಮತ್ತು ಶ್ರೀ ಗುಳಿಗ ದೈವಗಳ ನೇಮೋತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಶ್ರೀ ಧೂಮಾವತಿ ನೇಮೋತ್ಸವ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.

Edited By : Vinayak Patil
Kshetra Samachara

Kshetra Samachara

01/05/2026 03:20 pm

Cinque Terre

1.1 K

Cinque Terre

0

ಸಂಬಂಧಿತ ಸುದ್ದಿ