ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪರಿಶ್ರಮ ಪ್ರಾಮಾಣಿಕತೆಯ ಪ್ರಯತ್ನದ, ಸಂಕಲ್ಪ ಸಿದ್ಧಿಗೆ ದೈವಿಕ ಅನುಗ್ರಹವೇ ಪ್ರೇರಣೆ - ಪೇಜಾವರ ಶ್ರೀ

ಉಡುಪಿ: ಮನುಷ್ಯನ ಎಲ್ಲಾ ಪ್ರಾಮಾಣಿಕ ಪರಿಶ್ರಮದ ಪ್ರಯತ್ನದ ಸಂಕಲ್ಪಗಳು ಸಿದ್ಧಿಯಾಗಲು ದೈವಿಕ ಅನುಗ್ರಹವೇ ಪ್ರೇರಣೆಯಾಗಲಿದ್ದು, ಇಂದು ಉಚ್ಚಿಲ ಮಹಾಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನಿರಂತರ ಪ್ರಗತಿ, ಗ್ರಾಹಕರಿಗೆ ಉತ್ತಮ ಸೇವೆಯ ಜೊತೆಗೆ ಸಮಾಜಕ್ಕೆ ಆರ್ಥಿಕ ಚೈತನ್ಯ ತುಂಬುವ ಸಂಕಲ್ಪದೊಂದಿಗೆ ನಡೆಸಿದ ಚಂಡಿಕಾಯಾಗದ ಮೂಲಕ ದೇವರ ಅನುಗ್ರಹದಿಂದ ಬ್ಯಾಂಕಿನ ಅಧ್ಯಕ್ಷರಾದ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮುಂದಿನ ಯೋಜನೆಗಳು ಸಾಕಾರವಾಗಲಿ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ವತಿಯಿಂದ ಆಯೋಜಿಸಿದ್ದ ಚಂಡಿಕಾಯಾಗದ ಪೂರ್ಣಾಹುತಿ ಸಂದರ್ಭದಲ್ಲಿ ಆಶೀರ್ವದಿಸಿ ಅನುಗ್ರಹ ಸಂದೇಶ ನೀಡಿದರು.

ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಮಹಾಲಕ್ಷ್ಮೀ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆಯ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿ, ಸಿಬ್ಬಂದಿ ವರ್ಗದ ಸೇವೆಯ ಮೂಲಕ ಉತ್ತಮ ಸಹಕಾರಿ ಸಂಸ್ಥೆಯಾಗಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡುವ ಸಂಕಲ್ಪದೊಂದಿಗೆ ಚಂಡಿಕಾಯಾಗ ನಡೆಸಿದ್ದು, ಈ ಮೂಲಕ ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ದೇವರ ಹಾಗೂ ಸಮಾಜದ ಸರ್ವರ ಸಹಕಾರ ಸಿಗುವಂತಾಗಲಿ ಎಂದು ಹೇಳಿದರು.

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ತಂತಿಗಳ ನೇತೃತ್ವದಲ್ಲಿ ಚಂಡಿಕಾಯಾಗ ಸಂಪನ್ನಗೊಂಡಿತು.

Edited By :
Kshetra Samachara

Kshetra Samachara

01/05/2026 07:29 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ