ಬ್ರಹ್ಮಾವರ: ಎಪ್ರಿಲ್ 30 ರಂದು ಹಲವಾರು ಕಡೆಯಲ್ಲಿ ವಿವಾಹ ಕಾರ್ಯ ನಡೆಯುತ್ತಿದ್ದರೆ ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಇಲ್ಲಿನ ನಾಗದೇವರ ಸನ್ನಿಧಿಯ ಬಳಿ ಇರುವ ಅಶ್ವತ್ಥಕ್ಕೆ ಉಪನಯನ ಸಂಸ್ಕಾರ ಮತ್ತು ವಿವಾಹ ಮಹೋತ್ಸವ ಬಂಡೀಮಠ ತಮ್ಮಣ್ಣ ಅಡಿಗಳ ಪ್ರಧಾನ ಆಚಾರ್ಯತ್ವದಲ್ಲಿ ಹಲವಾರು ವೈದಿಕರ ಧಾರ್ಮಿಕ ವಿಧಿಯೊಂದಿಗೆ ನಡೆಯಿತು.
ವರನ ಕಡೆಯಿಂದ ದೇವಸ್ಥಾನದ ಆಡಳಿತ ಮೋಕ್ತೇಸರ ಡಾ ವೆಂಕಟರಮಣ ಉಡುಪ, ವಿಶಾಲಾಕ್ಷಿ ಉಡುಪ ದಂಪತಿಗಳಿಂದ ಅಶ್ವತ್ಥ ವೃಕ್ಷಕ್ಕೆ ಉಪನಯನ ಯಜ್ಞೋಪವೀತ ಧಾರಣೆಗೊಂಡ ಬಳಿಕ ಯುವತಿಯ ಅಲಂಕೃತಗೊಂಡ ವಧು ಬೇವಿನ ಗಿಡವನ್ನು ರಾಮಕೃಷ್ಣ ಅಡಿಗ ಮತ್ತು ಉಮಾ ಅಡಿಗ ದಂಪತಿಗಳು ವಿವಾಹಕಾರ್ಯ ಮಾಡಿದರು.
ಸನಾತನ ಧರ್ಮದ ಬ್ರಾಹ್ಮಣ ಆಚರಣೆಯಂತೆ ಉಪನಯನ ಮತ್ತು ವಿವಾಹಕಾರ್ಯ ನಡೆದ ಈ ಕಾರ್ಯಕ್ರಮಕ್ಕೆ ಮಂಗಳವಾದ್ಯ ವಿವಾಹ ಹೋಮ ಸೇರಿದಂತೆ ಅನೇಕ ವಿಧಿಗಳು ನಡೆದು ನೂರಾರು ಮಂದಿ ಭಾಗವಹಿಸಿ ಕಾರ್ಯಕ್ರಮ ವೀಕ್ಷಣೆ ಮಾಡಿ ಬಳಿಕ ದೇವಸ್ಥಾನದ ಮಹಾಪೂಜೆ ಅನ್ನ ಪ್ರಸಾದ ಪಡೆದರು. ಉತ್ಸವ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಶೆಟ್ಟಿಗಾರ್, ಅರ್ಚಕ ಗಣಪತಿ ಉಡುಪ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ
PublicNext
30/04/2026 10:29 pm
LOADING...