ಉಡುಪಿ: ಕೊಯಮತ್ತೂರಿನಿಂದ ಜಬಲಾಪುರಕ್ಕೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಉಡುಪಿ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ. ಸೋಮವಾರ ತಡರಾತ್ರಿ ಸಮಯವಾದ್ದರಿಂದ ಆತನಿಗೆ ಅಸಹಾಯಕ ಸ್ಥಿತಿ ಎದುರಾಗಿತ್ತು. ಇದನ್ನು ಗಮನಿಸಿದ ಕರ್ತವ್ಯ ನಿರತ ತಪಾಸಣಾಧಿಕಾರಿ, ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕನನ್ನು ಇಳಿಸಿ, ನಿಲ್ದಾಣ ನಿಯಂತ್ರಕರಿಗೆ ಮಾಹಿತಿ ನೀಡಿದರು. ತಕ್ಷಣ ರೈಲ್ವೆ ನಿಲ್ದಾಣ ನಿಯಂತ್ರಕರು ತಡರಾತ್ರಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ನೆರವು ಯಾಚಿಸಿದ್ದಾರೆ. ತಕ್ಷಣ ಒಳಕಾಡು ಆಂಬುಲೆನ್ಸ್ ವಾಹನದಲ್ಲಿ ಇಂದ್ರಾಳಿಯ ರೈಲು ನಿಲ್ದಾಣಕ್ಕೆ ಬಂದು ಗಂಭೀರ ಸ್ಥಿತಿಯಲ್ಲಿದ್ದ ಪ್ರಯಾಣಿಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ರೋಗಿಯ ಹೆಸರು ಲಕ್ಷ್ಮಣನ್ (37) , ತಮಿಳುನಾಡಿನ ನಿವಾಸಿ ಎಂದು ತಿಳಿದುಬಂದಿದೆ. ಸಂಬಂಧಿಕರು ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
PublicNext
30/04/2026 09:13 am
LOADING...