ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ರೈಲಿನಲ್ಲೇ ಸಹಜ ಹೆರಿಗೆ - ಮಾನವೀಯತೆಗೆ ಕಟ್ಟಬೇಕಿಲ್ಲ ತೆರಿಗೆ

ಬಂಟ್ವಾಳ: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು, ಬಿಸಿರೋಡಿನ ರೈಲು ನಿಲ್ದಾಣದಲ್ಲಿ ಬೋಗಿಯೊಳಗೆಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ತುಂಬು ಗರ್ಭಿಣಿಯ ಸ್ಥಿತಿಯನ್ನು ಗಮನಿಸಿದ ರೈಲಿನಲ್ಲೇ ಇದ್ದ ಇಬ್ಬರು ಮುಸ್ಲಿಂ ಮಹಿಳೆಯರು ಧೈರ್ಯದಿಂದಲೇ ಹೆರಿಗೆ ಮಾಡಿಸಲು ಮುಂದಾದರು. ತಕ್ಷಣ ಅವರು ರೈಲಿನ ಬೋಗಿಗೆ ಪರದೆ ಕಟ್ಟಿ ಹೆರಿಗೆಗಾಗಿ ಪ್ರಯತ್ನಿಸಿದರು. ರಕ್ತಸ್ರಾವವಾಗುತ್ತಿದ್ದರೂ ಧೃತಿಗೆಡದೆ ಪ್ರಯತ್ನ ಮುಂದುವರಿಸಿದರು. ಅವರೊಂದಿಗೆ ರೈಲಿನಲ್ಲಿದ್ದ ಇತರ ಮಹಿಳೆಯರೂ ಸಹಕರಿಸಿದರು. ಕೊನೆಗೂ ಸಹಜ ಹೆರಿಗೆ ಮಾಡಿಸುವಲ್ಲಿ ಮಹಿಳೆಯರ ತಂಡ ಯಶಸ್ವಿಯಾಯಿತು. ಬಳಿಕ ತಾಯಿ-ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ಕಿಶನ್ ಎಂಬವರು 'ಪಬ್ಲಿಕ್ ನೆಕ್ಸ್ಟ್‌'ಗೆ ಮಾಹಿತಿ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಸವಣೂರು ನಿವಾಸಿ ಪೊನ್ನಮ್ಮ ಅವರು ಹೆರಿಗೆಗೊಂಡ ಮಹಿಳೆಯಾಗಿದ್ದಾರೆ.

ಮಂಗಳೂರಿನಲ್ಲಿ ರೈಲು ಹತ್ತಿದ್ದ ಅವರು ಪ್ರಯಾಣದ ವೇಳೆ ಅಸ್ವಸ್ಥತೆಯನ್ನು ಅನುಭವಿಸಿ, ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಸಮುದಾಯದ ಮಹಿಳೆಯರು ತಕ್ಷಣ ನೆರವಿಗೆ ಧಾವಿಸಿ ಪ್ರಾಥಮಿಕ ಆರೈಕೆ ನೀಡಿದ್ದು, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Edited By :
PublicNext

PublicNext

27/04/2026 08:13 am

Cinque Terre

20.89 K

Cinque Terre

0

ಸಂಬಂಧಿತ ಸುದ್ದಿ