ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ವಾರಕ್ಕೆ 75 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾರಾಯಣ ಮೂರ್ತಿ ಅವರ ಕೆಲಸದ ಅವಧಿಯ ಪ್ರಸ್ತಾಪವನ್ನು ಕಟುವಾಗಿ ಟೀಕಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರು ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಆದರೆ, 'ಯಾರೋ ಸಿಂಪಲ್ ಸುಧಾ ಎಂಬುವವರ ಗಂಡ' ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು. ದಿನಕ್ಕೆ 12 ಗಂಟೆ ಕೆಲಸ ಮಾಡಬೇಕು ಅಂದ್ರೆ ನಾವೇನು ಪ್ರಾಣಿಗಳಾ? ಎಂದು ಪ್ರಶ್ನಿಸುವ ಮೂಲಕ ನಾರಾಯಣ ಮೂರ್ತಿ ವಿರುದ್ಧ ಕಿಡಿಕಾರಿದರು.
ನಾವು ಮನುಷ್ಯರು. ನಾವು ಕೆಲಸ ಮಾಡದಿದ್ದರೆ ಮಾಲೀಕರು ಮಾಲೀಕರಲ್ಲ. ಮಾಲೀಕರು ಕೆಲಸ ನೀಡಬಹುದು, ಆದರೆ ನಾವು ಕೆಲಸ ಮಾಡಿದಾಗ ಮಾತ್ರ ಅವರು ಮಾಲೀಕರು. ಎಲ್ಲವೂ ಒಟ್ಟಾಗಿ ಸಾಗಬೇಕು. ಸ್ವಾಭಿಮಾನ, ನಿಮ್ಮ ಹಕ್ಕುಗಳು ಮತ್ತು ಸಮಾನತೆಗಾಗಿ ಹೋರಾಡಬೇಕು ಎಂದು ಬಿ. ಕೆ. ಹರಿಪ್ರಸಾದ್ ಕಾರ್ಮಿಕರಿಗೆ ಕರೆ ನೀಡಿದರು.
PublicNext
01/05/2026 07:16 pm
LOADING...