ಮೈಸೂರು : ಪಾಳು ಬಾವಿಗೆ ಬಿದ್ದಿದ್ದ ಕಾಡುಹಂದಿಯನ್ನ ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ಘಟನೆ ನಡೆದಿದೆ. ಆಹಾರ ಅರಸಿ ಬಂದ ಕಾಡುಹಂದಿ
ತೋಟದ ತೆರೆದ ಬಾವಿಗೆ ಬಿದ್ದಿತ್ತು.ಹಂದಿಯ ಚೀರಾಟ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಡಿಆರ್‌ಎಫ್‌ಓ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆದಿದ್ದು ಬಲೆ ಸಹಾಯದಿಂದ ಹಂದಿಯನ್ನು ಮೇಲಕ್ಕೆತ್ತಿದ ಸಿಬ್ಬಂದಿ ಮತ್ತೆ ಕಾಡಿಗೆ ಬಿಟ್ಟಿದ್ದಾರೆ.
PublicNext
02/05/2026 07:27 am
LOADING...