ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮದ್ಯಪಾನ ಮಾಡುವಾಗ ಹಾರಿದ ಡ್ರೋನ್​ - ಕಲ್ಲೆಸೆತಕ್ಕೆ ಯತ್ನ

ಶಿವಮೊಗ್ಗ : ಜಿಲ್ಲೆಯಾದ್ಯಂತ ಅನೈತಿಕ ಚಟುವಟಿಕೆಗಳನ್ನು ತಡೆಯುವ ದೃಷ್ಟಿಯಿಂದ ಪೊಲೀಸರು ಡ್ರೋನ್ ಕ್ಯಾಮರಾಗಳ ಮೊರೆ ಹೋಗಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಮದ್ಯಪಾನ ಸೇವಿಸುತ್ತಿದ್ದವರನ್ನು ಡ್ರೋನ್ ಮೂಲಕ ಪತ್ತೆ ಹಚ್ಚಿ ಕೇಸ್ ದಾಖಲಿಸಿದ್ದಾರೆ .

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು ಗ್ರಾಮದ ಹೊರವಲಯದಲ್ಲಿ ಡ್ರೋನ್ ಹಾರಿಸಿದಾಗ, ಸಾರ್ವಜನಿಕ ಸ್ಥಳದಲ್ಲಿ ಕೆಲವರು ಮದ್ಯಪಾನ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೆ ಈ ವೇಳೆ ಕಿಡಿಗೇಡಿಗಳು ಕ್ಯಾಮರವನ್ನು ಕಂಡೊಡನೆ ಹೆದರದೆ ಅದರ ಮೇಲೆ ಕಲ್ಲೆಸೆಯುವ ಸಾಹಸವನ್ನು ಸಹ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯಪಾನ ಮಾಡುತ್ತಿದ್ದ ಸಂದೀಪ್, ಶಿವನೇಶ ಕುಮಾರ ಮತ್ತು ಮೇಘರಾಜ್ ಎಂಬುವವರನ್ನು ಗುರುತಿಸಿದ್ದಾರೆ. ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.

Edited By :
PublicNext

PublicNext

02/05/2026 01:46 pm

Cinque Terre

9.23 K

Cinque Terre

0

ಸಂಬಂಧಿತ ಸುದ್ದಿ