ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಡೆ ಎಂದು ನಂಬಿ ಒರಗಿದ ವ್ಯಕ್ತಿ: ರೇಲಿಂಗ್ ಇಲ್ಲದ ಬಾಲ್ಕನಿಯಿಂದ ಬಿದ್ದು ದುರಂತ ಸಾವು

ರೇಲಿಂಗ್ ಇಲ್ಲದ ಬಾಲ್ಕನಿಯನ್ನು ಗೋಡೆ ಎಂದು ನಂಬಿ ಒರಗಿದ ವ್ಯಕ್ತಿಯೊಬ್ಬರು ಮಹಡಿಯಿಂದ ಕೆಳಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ. ಈ ಘಟನೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ನಿರ್ಲಕ್ಷ್ಯದ ಫಲಿತಾಂಶವಾಗಿದ್ದು, ಅಮಾಯಕ ಜೀವವೊಂದನ್ನು ಬಲಿಪಡೆದಿದೆ. ವಿಶ್ರಾಂತಿ ಪಡೆಯಲು ಬಂದ ವ್ಯಕ್ತಿಯೊಬ್ಬರು ರೇಲಿಂಗ್ ಇದೆ ಎಂದು ಭಾವಿಸಿ ಹಿಂದಕ್ಕೆ ಒರಗಲು ಯತ್ನಿಸಿದಾಗ ಸಮತೋಲನ ಕಳೆದುಕೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಹೌದು ಕೆಲಸದ ನಡುವೆ ಸಣ್ಣ ವಿರಾಮ ಪಡೆಯಲು ಮೃತ ವ್ಯಕ್ತಿ ಬಾಲ್ಕನಿಗೆ ಬಂದಿದ್ದರು. ಕೈಯಲ್ಲಿ ಪಾನೀಯ ಹಿಡಿದು ಸುಧಾರಿಸಿಕೊಳ್ಳುತ್ತಿದ್ದ ಅವರು, ಸಹಜವಾಗಿ ಬಾಲ್ಕನಿಯಲ್ಲಿ ತಡೆಗೋಡೆ ಅಥವಾ ರೇಲಿಂಗ್ ಇರಬೇಕಾದ ಜಾಗಕ್ಕೆ ಬೆನ್ನು ಹಾಕಿ ಒರಗಲು ಪ್ರಯತ್ನಿಸಿದ್ದಾರೆ ಆದರೆ, ಆ ಸ್ಥಳದಲ್ಲಿ ಯಾವುದೇ ರಕ್ಷಣಾ ಬೇಲಿ ಇಲ್ಲದ ಕಾರಣ ಅವರು ನೇರವಾಗಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಸುರಕ್ಷತಾ ಮಾನದಂಡಗಳ ಪ್ರಕಾರ, ಪ್ರತಿ ಬಾಲ್ಕನಿಗೂ ಕನಿಷ್ಠ ಎತ್ತರದ ಗಟ್ಟಿಯಾದ ರೇಲಿಂಗ್ ಇರುವುದು ಕಡ್ಡಾಯ. ಈ ನಿಯಮವನ್ನು ಇಲ್ಲಿ ಗಾಳಿಗೆ ತೂರಲಾಗಿದೆಯೇ? ಇದು ಕಟ್ಟಡದ ಮಾಲೀಕರ ಅಥವಾ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯವೇ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಟ್ಟಡದ ಸುರಕ್ಷತಾ ಪ್ರಮಾಣಪತ್ರಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. "ಬಾಲ್ಕನಿಯಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳಿಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಕೇವಲ ಅಪಘಾತವಲ್ಲ, ಸುರಕ್ಷತಾ ಲೋಪದಿಂದ ಸಂಭವಿಸಿದ ಸಾವು," ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸ ಮನೆ ಅಥವಾ ಅಪಾರ್ಟ್‌ಮೆಂಟ್‌ಗಳಿಗೆ ಹೋಗುವಾಗ ಬಾಲ್ಕನಿ ಮತ್ತು ಕಿಟಕಿಗಳ ರೇಲಿಂಗ್‌ಗಳು ಗಟ್ಟಿಯಾಗಿವೆಯೇ ಮತ್ತು ಸರಿಯಾದ ಎತ್ತರದಲ್ಲಿವೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ. ಇದು ಇಂತಹ ದುರಂತಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಯಾವ ಲೋಕೇಶ್‌ನಲ್ಲಿ ನಡೆದಿರುವುದು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Edited By : Nirmala Aralikatti
PublicNext

PublicNext

02/05/2026 02:11 pm

Cinque Terre

6.63 K

Cinque Terre

0

ಸಂಬಂಧಿತ ಸುದ್ದಿ