ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: ಹಾರಿ ಬಿದ್ದ ಸ್ಕೂಟಿ - ಮಹಿಳೆ ಅದೃಷ್ಟವಶಾತ್‌ ಪಾರು

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವು ವಿಡಿಯೋಗಳು ನೋಡುವಾಗ ನಗು ತರಿಸಿದರೂ, ನಂತರ ಅಯ್ಯೋ ಎನಿಸುವಂತೆ ಮಾಡುತ್ತವೆ. ಸದ್ಯ ಅಂತಹದ್ದೇ ಒಂದು ವಿಡಿಯೋ 'X' ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ಸ್ಕೂಟಿ ಓಡಿಸಿಕೊಂಡು ಬರುತ್ತಿರುತ್ತಾರೆ. ರಸ್ತೆಯಲ್ಲಿರುವ ಅವೈಜ್ಞಾನಿಕ ಅಥವಾ ಎತ್ತರದ ಸ್ಪೀಡ್ ಬ್ರೇಕರ್ ಅನ್ನು ಗಮನಿಸದ ಅವರು, ವೇಗವಾಗಿ ಅದರ ಮೇಲೆ ಗಾಡಿ ಹತ್ತಿಸುತ್ತಾರೆ. ಪರಿಣಾಮ, ಸ್ಕೂಟಿ ನೆಲ ಬಿಟ್ಟು ಮೇಲೆ ಹಾರುತ್ತದೆ!

ಈ ದೃಶ್ಯವನ್ನು ನೋಡಿ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸ್ಪೀಡ್ ಬ್ರೇಕರ್ ಅಂದ್ರೆ ಹೀಗಿರಬೇಕು, ಸ್ಕೂಟಿ ಕೂಡ ವಿಮಾನದಂತೆ ಹಾರಬೇಕು" ಎಂದು ತಮಾಷೆ ಮಾಡಿದ್ದಾರೆ. ಆದ್ರೆ ಅದೃಷ್ಟವಶಾತ್ ಸ್ಕೂಟಿ ಸವಾರ ಮಹಿಳೆಗೆ ಯಾವುದೇ ದೊಡ್ಡ ಪೆಟ್ಟಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿರುವ ಇಂತಹ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಸೂಚನಾ ಫಲಕ ಇಲ್ಲದ ಅಥವಾ ಅತಿಯಾದ ಎತ್ತರವಿರುವ ಇಂತಹ ಬ್ರೇಕರ್‌ಗಳು ವಾಹನ ಸವಾರರ ಜೀವಕ್ಕೆ ಕುತ್ತು ತರುತ್ತವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

02/05/2026 02:18 pm

Cinque Terre

93.5 K

Cinque Terre

2

ಸಂಬಂಧಿತ ಸುದ್ದಿ