ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಬೆಳೆ ಭವಿಷ್ಯ ತಿಳಿಸುವ ನವಧಾನ್ಯ ಮೊಳಕೆ

ಚಳ್ಳಕೆರೆ: ಶ್ರೀ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವಗಳಲ್ಲಿ ನವಧಾನ್ಯ ಪೂಜೆಯು ಅತ್ಯಂತ ಮಹತ್ವದ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ. ಇದು ಮುಖ್ಯವಾಗಿ ದೇವರಿಗೆ ಅರ್ಪಿಸುವ ಕೃಷಿ ಸಂಸ್ಕೃತಿಯ ಸಂಕೇತವಾಗಿದೆ.

ಪ್ರಾರಂಭವಾಗಿ ಕಂಕಣ ಧಾರಣೆಯ ದಿನವೇ ದೇವಸ್ಥಾನದಲ್ಲಿ ನವಧಾನ್ಯಗಳು: ಒಂಬತ್ತು ವಿಧದ ಧಾನ್ಯಗಳನ್ನು (ಗೋಧಿ, ಭತ್ತ, ತೊಗರಿ, ಹೆಸರು, ಅವರೆ, ಕಡಲೆ, ಎಳ್ಳು, ಉದ್ದು, ಹುರುಳಿ) ಬಳಸಲಾಗುತ್ತದೆ. ಇವು ಸಮೃದ್ಧಿ ಮತ್ತು ಕೃಷಿ ಯಶಸ್ಸನ್ನು ಪ್ರತಿನಿಧಿಸುತ್ತವೆ.

ಪೂಜಾ ವಿಧಿ: ಜಾತ್ರೆಯ ಸಮಯದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರದೊಂದಿಗೆ ಈ ನವಧಾನ್ಯಗಳನ್ನು ಅರ್ಪಿಸಿ ನಂತರ 9 ಹೊಸ ಮಡಿಕೆಗಳನ್ನು ತಂದು ಮಡಿಕೆಗಳಲ್ಲಿ ಗೊಬ್ಬರ ಜೊತೆಗೆ ಈ ನವಧಾನ್ಯಗಳನ್ನು ಹಾಕಿ ಪೂಜೆ ವಿಧಾನಗಳ ಮೂಲಕ ದೇವಸ್ಥಾನದ ಮುಂಭಾಗದಲ್ಲಿರುವ ಒಂದು ರೂಮಿನಲ್ಲಿ ಇಡಲಾಗುತ್ತದೆ.

ಕಂಕಣ ವಿಸರ್ಜನೆಯ ನಂತರ ಈ ನವಧಾನ್ಯಗಳಲ್ಲಿ ಯಾವ ಪೈರು ಚೆನ್ನಾಗಿ ಮೂಡಿ ಬರುತ್ತೋ ಆ ಬೆಳೆ ಈ ವರ್ಷ ಉತ್ತಮವಾಗಿರುತ್ತೆ ಉತ್ತಮ ಮಳೆ ಆಗುತ್ತೆ ಎನ್ನುವ ನಂಬಿಕೆ ಇದೆ.

ಪುರಾತನ ಕಾಲದಿಂದಲೂ ಈ ದೇವಸ್ಥಾನದಲ್ಲಿ ಮಳೆ ಹಾಗೂ ಬೆಳೆ ಭವಿಷ್ಯವನ್ನು ಹೇಳುವ ನವಧಾನ್ಯಗಳ ವಿಶೇಷ ಪೂಜೆ ಇಲ್ಲಿ ಮಾಡಿಕೊಂಡು ಬರಲಾಗುತ್ತಿದೆ.

Edited By : PublicNext Desk
Kshetra Samachara

Kshetra Samachara

02/05/2026 04:23 pm

Cinque Terre

4.9 K

Cinque Terre

0

ಸಂಬಂಧಿತ ಸುದ್ದಿ