ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ : ಅಂಗಾರಕ ಸಂಕಷ್ಟ ಚತುರ್ಥಿ: ಗಣಪತಿಯ ಕೃಪೆಗೆ ಭಕ್ತರ ಸಾಗರ!

ಚಳ್ಳಕೆರೆ : ಮಂಗಳವಾರ ಚತುರ್ಥಿ ಬಂದರೆ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನಕ್ಕೆ ಬಹಳ ಮಹತ್ವವಿದೆ.

ಪುರಾಣಗಳ ಪ್ರಕಾರ, ಶಿವನು ತನ್ನ ಪುತ್ರನಾದ ಗಣೇಶನನ್ನು ಎಲ್ಲಾ ದೇವರುಗಳ ಪೂಜೆಗೆ ಮೊದಲು ಪೂಜಿತನೆಂದು ಘೋಷಣೆ ಮಾಡಿದ ದಿನ ಎನ್ನಲಾಗುತ್ತದೆ.ಈ ದಿನ ಗಣೇಶನು ಧರೆಗೆ ಇಳಿದು ಬಂದು ಭಕ್ತರ ಸಂಕಷ್ಟಗಳನ್ನು ಆಲಿಸುತ್ತಾರೆ ಎಂದೇ ನಂಬಲಾಗುತ್ತದೆ. ಅದರಂತೆ ಇಂದು ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿರುವ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟ ಪ್ರಯುಕ್ತ ಹೋಮ ಹವನ ವಿಶೇಷ ಕೈಂಕರ್ಯಗಳು ಜರುಗಿದವು ಬಲಮುರಿ ಗಣಪತಿಗೆ ಕವಡೆಗಳನ್ನು ಪೋಣಿಸಿ ಅಲಂಕಾರ ಮಾಡಲಾಗಿತ್ತು.

ಗಣಪತಿಗೆ ಕಡುಬಿನ ಹಾರದ ಜತೆಗೆ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತುಕವಡೆ ರೂಪದಲ್ಲಿ ಕಾಣಿಸಿಕೊಂಡ ಬಲಮುರಿ ಸಾವಿರಾರು ಜನರು ದೇಗುಲಕ್ಕೆ ಆಗಮಿಸಿ ದರ್ಶನವನ್ನು ಪಡೆದರು.ದೇವಸ್ಥಾನದಲ್ಲಿ ನೂರಾರು ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಗಣಪತಿಯಲ್ಲಿ ಭಕ್ತರು ಬೇಡಿಕೊಂಡರುಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಸಂಕಷ್ಟ ಗಣಪತಿ ಪೂಜೆಯಲ್ಲಿ ಭಾಗಿಯಾದರು.

Edited By : PublicNext Desk
Kshetra Samachara

Kshetra Samachara

06/05/2026 09:23 am

Cinque Terre

260

Cinque Terre

0

ಸಂಬಂಧಿತ ಸುದ್ದಿ