ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಕಪಿಲೇಶ್ವರ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ದುರ್ಮರಣ

ಬೆಳಗಾವಿ : ಈಜಲು ಹೋಗಿದ್ದ ಅಪ್ರಾಪ್ತ ಇಬ್ಬರು ಬಾಲಕರು ದುರ್ಮರಣ ಹೊಂದಿರುವ ಘಟನೆ ಬೆಳಗಾವಿ ನಗರದ ಕಪಿಲೇಶ್ವರ ಹೊಂಡದಲ್ಲಿ ನಡೆದಿದೆ.

ಶಿವಾಜಿ ನಗರದ ಶಿವಂ ಪರಶುರಾಮ ಸುಂಡೀಕರ್ (07) ಹಾಗೂ ಜೇಡಗಲ್ಲಿ ಶಹಾಪುರ ಗಲ್ಲಿಯ ಬಾಲಕ ಪರಶುರಾಮ ರಾಜು ನೀಲಜಕರ್ (11) ಸಾವನ್ನಪ್ಪಿದ ಬಾಲಕರು.

ಘಟನಾ ಸ್ಥಳಕ್ಕೆ ಅಗ್ನಿಶಾಮಕ, ಎಸ್ ಡಿಆರ್ ಎಫ್ ಸಿಬ್ಬಂದಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸುವ ಮೂಲಕ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಬಾಲಕರ ಶವ ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By :
PublicNext

PublicNext

03/05/2026 01:15 pm

Cinque Terre

15.09 K

Cinque Terre

0

ಸಂಬಂಧಿತ ಸುದ್ದಿ