ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಮೇ 9-10 ಜಿತೋ ಹರ್ಷೋತ್ಸವ ಕಾರ್ಯಕ್ರಮ

ಬೆಳಗಾವಿ : ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ‌ ಕಾರ್ಯಗಳನ್ನು ಮಾಡುತ್ತ ಬಂದಿರುವ ಜೈನ ಇಂಟರ್ ನ್ಯಾಶನಲ್ ಟ್ರೇಡ್ ಆರ್ಗನೈಸೇಶನ್ ಜಿತೋ ಸಂಸ್ಥೆ ಬೆಳಗಾವಿ ವತಿಯಿಂದ ಹಾಗೂ ಜಿತೋ ಕೆಕೆಜಿ ವಲಯ ಇವರ ಸಹಯೋಗದೊಂದಿಗೆ ಮೇ 9 ಮತ್ತು 10 ಎರಡು ದಿನಗಳ‌ ಕಾಲ ಜಿತೋ ಹರ್ಷೋತ್ಸವ ಕಾರ್ಯಕ್ರಮವನ್ನು ಬೆಳಗಾವಿಯ ಕೆ.ಎಲ್.ಇ. ಶತಮಾನೋತ್ಸವ ಸಭಾಗೃಹದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ವಿಕ್ರಮ ಜೈನ ಅವರು ತಿಳಿಸಿದರು.

ಬೆಳಗಾವಿ ನಗರದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಅವರು, ಜಿತೋ ಸಂಸ್ಥೆಯು ಪ್ರತಿವರ್ಷ ಆರೋಗ್ಯ ತಪಾಸಣೆ ಶಿಬಿರ , ರಕ್ತದಾನ ಶಿಬಿರ ಸೇರಿದಂತೆ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದೆ.‌

ಇದೀಗ ಜಿತೋ ಹರ್ಷೋತ್ಸವ ಕಾರ್ಯಕ್ರಮ ಮೂಲಕ ಬೆಳಗಾವಿಯ ಜನತೆಗೆ ಹೆಚ್ಚಿನ ಜ್ಞಾನಾರ್ಜನೆ ನೀಡುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ತಜ್ಞ ಉಪನ್ಯಾಸಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಏಪ್ರಿಲ್ 9 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ‌. ರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಸುನಿಲ್ ಶಿಂಘಿ ಅವರು ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡುವರು. ಅವರೊಂದಿಗೆ ಜಿತೋ ಅಪೆಕ್ಸ್ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಅವರು ಹೇಳಿದರು.

ಮಧ್ಯಾಹ್ನದ ಅವಧಿಯಲ್ಲಿ ವಿವಿಧ ಸ್ತರದ ನೈಜ ಕಥೆಗಳ ವಿವರವನ್ನು ಶಾನದಾರ್ ಶಾಂತಿಭಾಯಿ ಅವರು ನೀಡಲಿದ್ದಾರೆ. ತನ್ನ ಜಾದು ಕಲೆಯ ಮೂಲಕ ಮನಸ್ಸು ಅರ್ಥಮಾಡಿಕೊಂಡು ಅದನ್ನು ಉತ್ತರಿಸುವ ಕಲಾಕಾರ ವಿವೇಕ ಶಿಂಘಿ ಅವರು ತಮ್ಮ ಜಾದು ಕಲೆಯನ್ನು ಪ್ರದರ್ಶಿಸುವರು.

ಸಾಯಂಕಾಲ 7 ಗಂಟೆಗೆ ಖ್ಯಾತ ಭಕ್ತಿಗೀತೆ ಹಾಡುವ ವಿವೇಕ ಡಿ. ಪಾರೇಖ ಮತ್ತು ಅವರ ತಂಡದಿಂದ ವಿಶೇಷ ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಮೇ 10 ರಂದು ಬೆಳಿಗ್ಗೆ ದೈವಿಶಕ್ತಿ ಮತ್ತು ಮಹಿಳಾ ನಿರ್ಭರತೆ ಕುರಿತು ಖ್ಯಾತ ಆಧ್ಯಾತ್ಮಿಕ ಉಪನ್ಯಾಸಕ ರಿಷಿ ನಂದಾ ಅವರು ಉಪನ್ಯಾಸ ನೀಡುವರು. ತದನಂತರ ಕೃಷ್ಣಾ ರಾಠಿ ಇವರು ವೈಯಕ್ತಿಕ ಮತ್ತು ವ್ಯವಹಾರ ಬ್ರ್ಯಾಂಡ್ ನಿರ್ಮಾಣ ಬಗ್ಗೆ ಮಾತನಾಡುವರು.

ಭಾರತ ದೇಶದ ರಾಜತಾಂತ್ರಿಕ ಹಾಗೂ ಕೇಂದ್ರ ಸರಕಾರದ ಓರ್ವ ಸಲಹೆಗಾರರಾದ ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ. ದೀಪಕ್ ವೋರಾ ಅವರು " ಜಾಂಬವಂತ ಪರಿಣಾಮ- ಇಂಡಿಯಾ ಹೇಗೆ ಭಾರತವಾಗುತ್ತದೆ" ಎಂಬ ವಿಷಯ ಬಗ್ಗೆ ಮಾತನಾಡುವರು ಎಂದು ಅವರು ತಿಳಿಸಿದರು. ‌

ಮಧ್ಯಾಹ್ನದ ಅವಧಿಯಲ್ಲಿ ಜೀವನದಲ್ಲಿ ಎಲ್ಲವೂ ಸಾಧ್ಯ ಎಂಬ ವಿಷಯ ಕುರಿತು ರಾಹುಲ್ ಕಪೂರ್ ಅವರು ಮಾತನಾಡಲಿದ್ದಾರೆ. ಇದಾದ ಬಳಿಕ ಯುವ ಯಶಸ್ವಿ ಉದ್ಯಮಿಗಳ ಸಂದರ್ಶನ ನಡೆಯಲಿದೆ ಎಂದು ಹೇಳಿದ ಅವರು ಈ ಎಲ್ಲ ಕಾರ್ಯಕ್ರಮಗಳು ಆಹ್ವಾನಿತ ಪಾಸ್‌ಗಳ ‌ಮೇಲೆ ಪ್ರವೇಶ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ವೇಳೆ ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ, ಪದಾಧಿಕಾರಿ ಅಭಯ ಆದಿಮನಿ ಇದ್ದರು

Edited By : Manjunath H D
PublicNext

PublicNext

05/05/2026 10:48 pm

Cinque Terre

14.23 K

Cinque Terre

0

ಸಂಬಂಧಿತ ಸುದ್ದಿ