ಖಾನಾಪುರ: ಹಿಂದೂ ಸ್ವಾಮಿಗಳು ಹಾಗೂ ಮಠಾಧೀಶರು ಕಾವಿ ಧರಿಸಿ ಮಠದಲ್ಲಿ ಕೂರುವ ಬದಲು ಇಂತಹ ಧರ್ಮ ಜಾಗೃತಿ ಕಾರ್ಯಗಳಿಗೆ ಮುಂದಾಗಬೇಕು ಆವಾಗ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ತಾಲೂಕಿನ ನಂದಗಡ ಗ್ರಾಮದ ವಿರಕ್ತಮಠದಲ್ಲಿ ನಡೆದ ಹಿಂದೂ ಮಹಾಜ್ಯೋತಿ ಪಾದಯಾತ್ರೆ ಮತ್ತು ಧರ್ಮಜಾಗೃತಿ ಕಾರ್ಯಕ್ರಮ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಹಿಂದೂ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಅಲ್ಲದೆ ಅದನ್ನ ನಾಶ ಮಾಡಲು ಹಲವಾರು ಜನ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ ಆದರೆ ನಮ್ಮ ಕೆಲವು ಸ್ವಾಮೀಜಿಗಳು ನಮ್ಮ ಧರ್ಮದ ಬಗ್ಗೆ ಮಾತನಾಡುವುದನ್ನ ನೋಡಿದರೆ ವಿಷಾದವೆನಿಸುತ್ತದೆ.ಆದರೆ ತಮ್ಮ ಹತ್ತೊಂಭತ್ತನೇ ವಯಸ್ಸಿನಲ್ಲಿ ಚನ್ನವೀರ ಸ್ವಾಮೀಜಿಯವರು ಇಂತಹ ದೊಡ್ಡ ಕಾರ್ಯಕ್ಕೆ ಕೈ ಹಾಕಿರುವುದು ಹೆಮ್ಮೆಯ ವಿಷಯ ಎಂದರು.
ಅಲ್ಲದೆ ನಂದಗಡ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಗ್ಗೆ ನನಗೆ ಅಪಾರ ಭಕ್ತಿ ಮತ್ತು ನಂಬಿಕೆ ಇದೆ ಏಕೆಂದರೆ ನಾನು ಸಕ್ಕರೆ ಕಾರ್ಖಾನೆ ಕಟ್ಟುವ ಪ್ರಕರಣ ಸುಮಾರು ವರ್ಷಗಳಿಂದ ಹೈಕೋರ್ಟ್ ನಲ್ಲಿ ನಡೆದಿತ್ತು ಆದರೆ ಎರಡು ವರ್ಷಗಳ ಹಿಂದೆ ಕಾರ್ಯನಿಮಿತ್ಯ ನಂದಗಡ ಮಾರ್ಗವಾಗಿ ತೆರಳುವಾಗ ರಾಯಣ್ಣನ ಸಮಾಧಿಗೆ ನಂದಗಡಕ್ಕೆ ಬಂದು ಕಾಲಿಡುವ ಮುನ್ನವೇ ನನ್ನ ಕೇಸು ಹೈಕೋರ್ಟ್‌ನಿಂದ ಬಿಡುಗಡೆಯಾಯಿತು ಆದ್ದರಿಂದ ಅವತ್ತೇ ರಾಯಣ್ಣಿಗೆ ಬೇಡಿಕೊಂಡಂತೆ ಪ್ರತಿ ಸ್ವಾತಂತ್ರೋತ್ಸವದಂದು ಬರುವ ಭಕ್ತರಿಗೆ ಅನ್ನಸಂತರ್ಪಣೆ ಮಾಡುತ್ತಾ ಬಂದಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಇಂದಿನ ನಮ್ಮ ಯುವ ಪೀಳಿಗೆ ಮೊಬೈಲ್ ಮತ್ತು ಗಾಂಜಾದಂತಹ ದುಷ್ಚಟಗಳಿಗೆ ದಾಸರಾಗುತ್ತಿದ್ದು ಸಾಕಷ್ಟು ಕಳವಳದ ವಿಷಯವಾಗಿದೆ ಅಂತಹ ಯುವಕರಿಗೆ ಇಂತಹ ಎಳೆ ವಯಸ್ಸಿನಲ್ಲಿ ಧರ್ಮಜಾಗೃತಿ ಕಾರ್ಯಕ್ಕೆ ಕೈ ಹಾಕಿರುವ ವಿರಕ್ತಮಠದ ಚನ್ನವೀರ ಶ್ರೀಗಳು ಮಾದರಿಯಾಗಿದ್ದಾರೆ ಧರ್ಮ ಉಳಿದರೆ ನಾವೆಲ್ಲ ಆದ್ದರಿಂದ ಇಂತಹ ಕಾರ್ಯಗಳಿಗೆ ಆದಷ್ಟು ಶ್ರೀಗಳಿಗೆ ತನು,ಮನ,ಧನದಿಂದ ಕೈ ಜೋಡಿಸುವಂತೆ ಭಕ್ತರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುರಘಾ ಮಠದ ಮಲ್ಲಿಕಾರ್ಜುನ ಸ್ವಾಮಿಗಳು,ಗೋಸಾಯಿ ಮಹಾಸಂಸ್ಥಾನ ಮಠದ ಜಗದ್ಗುರು ವೇದಾಂತಾರ್ಯ ಮಹಾಸ್ವಾಮಿಗಳು,ಪಾರೀಶ್ವಾ ಹಿರೇಮುನಳ್ಳಿಯ ಶಿವಾಚಾರ್ಯ ಸ್ವಾಮಿಗಳು,ಅಭಿನವ ಬಸವರಾಜ ದೇವರು,ಮಾಜಿ ಶಾಸಕ ಅರವಿಂದ ಪಾಟೀಲ್, ಬಿಜೆಪಿ ಮುಖಂಡ ಪ್ರಮೋದ್ ಕೊಚೇರಿ,ಧನಶ್ರೀ ದೇಸಾಯಿ,ಪಂಡಿತ ಓಗಲೆ,ಜ್ಯೋತಿಬಾ ಭರಮಪ್ಪನವರ,ಶ್ರೀಕಾಂತ ಇಟಗಿ,ಕಾಂಗ್ರೆಸ್ ಮುಖಂಡ ಮಹಾಂತೇಶ್ ರಾವುತ್,ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಮೇಘಾ ಕುಂದರಗಿ,ಕರವೇ ಅಧ್ಯಕ್ಷ ವಿಠ್ಠಲ ಹಿಂಡಲಕರ ಉಪಸ್ಥಿತರಿದ್ದರು. ನೆರೆದಿದ್ದ ಗಣ್ಯರನ್ನು ಗಂಗಾಧರ ಮಡ್ಡಿಮನಿ ಸ್ವಾಗತಿಸಿದರು.ವಿವೇಕ ಕುರಗುಂದ ಸ್ವಾಗತಿಸಿ ವಂದಿಸಿದರು.
ನಾಗೇಶ್ ನಾಯ್ಕರ್ ಪಬ್ಲಿಕ್ ನೆಕ್ಸ್ಟ್ ಖಾನಾಪುರ
PublicNext
03/05/2026 10:05 pm