ಬೆಳಗಾವಿ: ಮೇ ,9 ರಂದು ಚಿತ್ರದುರ್ಗದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರ 50 ವರ್ಷಗಳ ರಾಜಕೀಯ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನೀಲ್ ಬೆನಕೆ ಅವರು ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನಾನು ಶಾಸಕನಿದ್ದಾಗ ಯಡಿಯೂರಪ್ಪನವರು ಸಿಎಂ ಇದ್ದರು. ಆ ಸಮಯದಲ್ಲಿ ಕ್ಯಾಬಿನೆಟ್ ಇರಲಿಲ್ಲ. ಅದೇ ಸಂದರ್ಭದಲ್ಲಿ ಪ್ರವಾಹದಿಂದ ಬೆಳಗಾವಿಯಲ್ಲಿ ತುಂಬಾ ಸಮಸ್ಯೆ ಆಗಿತ್ತು. 8 ಸಲ ಸತತವಾಗಿ ಬೆಳಗಾವಿಗೆ ಆಗಮಿಸಿ ಸಮಸ್ಯೆಗೆ ಪರಿಹಾರ ನೀಡಿದರು. ಅಂತಹ ದಿಗ್ಗಜ ನಾಯಕರು ಅವರು, ಪ್ರವಾಹ ಹಾಗೂ ಮಳೆ ಹಾನಿಯಾದ ಮನೆಗಳಿಗೆ ಐದು ಲಕ್ಷ ಘೋಷಣೆ ಮಾಡಿದ್ದೆ ಯಡಿಯೂರಪ್ಪನವರು, ಅವರ ಅಭಿನಂದನಾ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕು ಎಂದು ಕರೆ ನೀಡಿದರು.
PublicNext
05/05/2026 07:15 pm
LOADING...