ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿ ಭವನದಲ್ಲಿ ಬಾರ್: ಕಟ್ಟಡ ಸುಪರ್ದಿಗೆ ಪಡೆಯುವಂತೆ ಆಗ್ರಹ

ಬೆಳಗಾವಿ: ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಎದುರಿಗಿರುವ ಕೃಷಿ ಭವನವನ್ನು (ಪ್ರಸ್ತುತ ಅಪೊಲೊ ಬಾರ್) ಸರಕಾರದ ಸುಪರ್ದಿಗೆ ಪಡೆಯಬೇಕು ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದ್ದಗೌಡ ಮೋದಗಿ ಅವರು ಒತ್ತಾಯಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಹೃದಯ ಭಾಗದಲ್ಲಿರುವ ಕೃಷಿ ಭವನವನ್ನು 1996ರಲ್ಲಿ

ಖಾಸಗಿ ವ್ಯಕ್ತಿಗೆ ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಮಾರಾಟ ಮಾಡಲು ಪ್ರತಿ ತಿಂಗಳ ಬಾಡಿಗೆಯ ಆಧಾರದ ಮೇಲೆ ಗುತ್ತಿಗೆ ನೀಡಲಾಗಿತ್ತು. ಆದರೆ, ಇದೀಗ ಈ ಕೃಷಿ ಭವನವನ್ನು ಬಾರ್ ಮತ್ತು ರೆಸ್ಟೋರೆಂಟ್ ನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು.

ರೈತರಿಗೆ, ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದ್ದ ಕೃಷಿ ಭವನ ಈಗ ಮದ್ಯ ಮಾರಾಟದ ಮಳಿಗೆ ಮತ್ತು ಲಾಡ್ಜ್ ಆಗಿದೆ. 2016ರಿಂದ ನಿರಂತರವಾಗಿ ಭಾರತೀಯ ಕೃಷಿಕ ಸಮಾಜದ ವತಿಯಿಂದ ಈ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಈ ನಡುವೆ ಭವನದ ವಿಚಾರವಾಗಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹಾಗಾಗಿ ಕೂಡಲೇ ಕೃಷಿ ಭವನಕ್ಕೆ ಸಂಬಂಧಪಟ್ಟಂತೆ ಸಮರ್ಪಕ ದಾಖಲೆಗಳನ್ನು ಸಂಗ್ರಹಿಸಿ, ನ್ಯಾಯಾಲಯಕ್ಕೆ ಒದಗಿಸುವ ಮೂಲಕ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಒಂದು ಕಟ್ಟಡವನ್ನು ಷರತ್ತಿಗೊಳಪಟ್ಟು ಬಾಡಿಗೆ ಪಡೆದ ಮೇಲೆ ಅದೇ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕು. ಆದರೆ, ಇಲ್ಲಿ ಷರತ್ತುಗಳನ್ನು ಉಲ್ಲಂಘಿಸಿ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲಾಗುತ್ತಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟವಾಗುತ್ತಿದೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ,ವಂಚಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕೃಷಿ ಭವನವನ್ನು ಸರಕಾರದ ಸುಪರ್ದಿಗೆ ಪಡೆಯಬೇಕು‌. ಇಲ್ಲವಾದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಸಂಜೀವ ಡೊಂಗರಗಾವಿ, ಮಲ್ಲಿಕಾರ್ಜುನ ಡೊಂಗರಗಾವಿ, ಶೇಖರ, ಶಿವಲೀಲಾ ಮೀಸಾಳೆ, ಈರಪ್ಪ ಪಟ್ಯಿಹಾಳ ಉಪಸ್ಥಿತರಿದ್ದರು.

Edited By : Somashekar
PublicNext

PublicNext

28/04/2026 04:19 pm

Cinque Terre

9.95 K

Cinque Terre

0

ಸಂಬಂಧಿತ ಸುದ್ದಿ