ಬೆಳಗಾವಿ: ಬೆಳಗಾವಿಯ ಕೋಟೆ ಆವರಣದಲ್ಲಿರುವ ಐತಿಹಾಸಿಕ ಕಮಲ ಬಸದಿಯಲ್ಲಿ ಇದೇ ಏಪ್ರಿಲ್ 24 ರಿಂದ 28 ರವರೆಗೆ ಇದು ದಿನಗಳ ಕಾಲ ಧರ್ಮಚಕ್ರ ಆರಾಧನಾ ಮಹೋತ್ಸವವನ್ನು ಆಚರಿಸಲಾಗಿತ್ತಿದ್ದು, ಇಂದು ವೈಭವದಿಂದ ಮೆರವಣಿಗೆ ನಡೆಯಿತು.
ಬೆಳಗಾವಿ ನಗರ ಸರ್ವ ಧರ್ಮಗಳ ನೆಲೆ ಬೀಡಾಗಿದೆ. ಇಲ್ಲಿ ಎಲ್ಲ ಧರ್ಮ , ಸಂಪ್ರದಾಯದ ಮಹೋತ್ಸವಗಳು ನಡೆಯುತ್ತವೆ. ಇದೀಗ ವಿಶ್ವ ಶಾಂತಿಗಾಗಿ ಜೈನ ಧರ್ಮದ ಒಂದು ಐತಿಹಾಸಿಕ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯುತ್ತಿದೆ.
ಇಂದು ಬೆಳಿಗ್ಗೆ ಕಮಲ ಬಸದಿ ಆವರಣದಲ್ಲಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ವೀರಕುಮಾರ ಪಾಟೀಲ, ಸಂಜಯ ಪಾಟೀಲ, ಅರಿಹಂತ ಉದ್ಯೋಗ ಸಮೂಹದ ಉತ್ತಮ ಪಾಟೀಲ ಮತ್ತು ಅಭಿನಂದನ ಪಾಟೀಲ, ಖ್ಯಾತ ನ್ಯಾಯವಾದಿ ರವಿರಾಜ ಪಾಟೀಲ, ಉದ್ಯಮಿ ಭರತ ಬಾಗಿ ಮೊದಲಾದವರು ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.
ಸುಮಾರು 150 ಮಕ್ಕಳಿಗೆ ಮೌಂಜಿ ಬಂಧನ ಕಾರ್ಯಕ್ರಮ ನಡೆದಿದೆ.
ಧರ್ಮಚಕ್ರ ಆರಾಧನಾ ಮಹೋತ್ಸವದ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿ ಆಗಿ ಮೆರವಣಿಗೆಗೆ ಮೆರಗು ನೀಡಿದರು. ಮಹಿಳೆಯರು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
PublicNext
27/04/2026 09:35 pm
LOADING...