ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಉಗರಗೋಳ ಜಾತ್ರೆಯಲ್ಲಿ ಅಚ್ಚರಿಯ ಪ್ರದರ್ಶನ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಅದ್ಭುತ ಶಕ್ತಿ ಪ್ರದರ್ಶನ ನಡೆಸಲಾಗಿದೆ.

ಗ್ರಾಮದ ಯುವಕರು 108 ಕೆಜಿ ತೂಕದ ಜೋಳದ ಚೀಲವನ್ನು ನಾಲ್ಕು ತಂಬಿಗೆಯ ಮೇಲೆ ನಿಂತು ಯಾರ ಸಹಾಯವಿಲ್ಲದೆಯೇ ಬಸವೇಶ್ವರ ಸರ್ಕಲ್‌ನಿಂದ ದೇವಸ್ಥಾನದ ವರೆಗೆ ದೀರ್ಘ ನಮಸ್ಕಾರ ಹಾಕಿದ್ದನು.

ಗ್ರಾಮದ 21 ವರ್ಷದ ಕುಮಾರ ಶಿದ್ದಪ್ಪ ಯಲ್ಲಪ್ಪ ಯಡ್ರಾಂವಿ ಎಂಬ ಯುವಕ ಸಾಹಸ ಮಾಡಿದ್ದು, ಈ ಮೂಲಕ ಜಾತ್ರೆಗೆ ಮತ್ತಷ್ಟು ಮೆರಗು ತಂದು, ನೋಡುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು. ಈ ಶಕ್ತಿ ಪ್ರದರ್ಶನ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

Edited By :
PublicNext

PublicNext

27/04/2026 10:15 am

Cinque Terre

10.68 K

Cinque Terre

0

ಸಂಬಂಧಿತ ಸುದ್ದಿ