ಬೆಳಗಾವಿ : ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಭೂತಪೂರ್ವ ಗೆಲುವಿಗೆ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ತಮಿಳುನಾಡು ಜನರ ತೀರ್ಪು ಅಚ್ಚರಿ ತಂದಿದೆ. ಹೊಸ ಪಕ್ಷಕ್ಕೆ ಜನರು ಇಷ್ಟೊಂದು ಬೆಂಬಲ ನೀಡಿರುವುದು ರಾಜಕೀಯದಲ್ಲಿ ಹೊಸ ಅಧ್ಯಾಯ" ಎಂದು ಪ್ರತಿಕ್ರಿಯಿಸಿದರು.
TVK ಪಕ್ಷ ಮೊದಲ ಚುನಾವಣೆಯಲ್ಲೇ ಭಾರಿ ಯಶಸ್ಸು ಗಳಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಭಾರತದಲ್ಲಿ ಸಿನಿಮಾ ನಟರ ರಾಜಕೀಯ ಪ್ರವೇಶ ಹೊಸದಲ್ಲದಿದ್ದರೂ, ವಿಜಯ್ ಅವರ ಈ ಗೆಲುವು ಮಹತ್ವ ಪಡೆದಿದೆ.
PublicNext
04/05/2026 05:17 pm
LOADING...