ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡಿನಲ್ಲಿ ವಿಜಯ್‌ ಅಬ್ಬರ, ಸಮೀಕ್ಷೆ ನಿಜವಾಯ್ತು! - ಕುಣಿದು ಕುಪ್ಪಳಿಸಿದ 'ಆಕ್ಸಿಸ್ ಮೈ ಇಂಡಿಯಾ' ಮುಖ್ಯಸ್ಥ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಟ್ರೆಂಡ್‌ಗಳು ಈಗ ಇಡೀ ದೇಶದ ಗಮನ ಸೆಳೆಯುತ್ತಿವೆ. ವಿಶೇಷವಾಗಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಬಗ್ಗೆ ಆಕ್ಸಿಸ್ ಮೈ ಇಂಡಿಯಾ (Axis My India) ನೀಡಿದ್ದ ಎಕ್ಸಿಟ್ ಪೋಲ್ ಭವಿಷ್ಯವು ಅಕ್ಷರಶಃ ನಿಜವಾಗಿದೆ. ಈ ಯಶಸ್ಸಿನ ಖುಷಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಪ್ರದೀಪ್ ಗುಪ್ತಾ ಅವರು ಭರ್ಜರಿ ಸ್ಟೆಪ್ ಹಾಕಿದ್ದಾರೆ.

ತಮಿಳುನಾಡಿನ ಚುನಾವಣಾ ಫಲಿತಾಂಶಗಳು ಹೊರಬೀಳುತ್ತಿದ್ದಂತೆ, ಪ್ರದೀಪ್ ಗುಪ್ತಾ ಅವರು ತಮ್ಮ ಕಚೇರಿಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಅವರ ಪಕ್ಷವು ದೊಡ್ಡ ಮಟ್ಟದ ಪ್ರಭಾವ ಬೀರಲಿದೆ ಎಂದು ಪ್ರದೀಪ್ ಗುಪ್ತಾ ಭವಿಷ್ಯ ನುಡಿದಿದ್ದರು. ಫಲಿತಾಂಶದ ಖುಷಿಯಲ್ಲಿ ಪ್ರದೀಪ್ ಗುಪ್ತಾ ಅವರು ಸ್ಟೆಪ್ ಹಾಕಿರುವ ವಿಡಿಯೋವನ್ನು 'M9 News' ಹಂಚಿಕೊಂಡಿದ್ದು, ವಿಜಯ್ ಅಭಿಮಾನಿಗಳು ಇದನ್ನು ಸಂಭ್ರಮಿಸುತ್ತಿದ್ದಾರೆ.

Edited By :
PublicNext

PublicNext

04/05/2026 07:44 pm

Cinque Terre

6.85 K

Cinque Terre

0