ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂದು 'ಸನಾತನ'ಕ್ಕೆ ಅವಮಾನ : ಇಂದು ಅದೇ ನಾಯಕರಿಗೆ ಸೋಲಿನ ದುಮ್ಮಾನ

ಅಂದು ಹಿಂದೂ ಸನಾತನ ಧರ್ಮಕ್ಕೆ ಬಾಯಿಗೆ ಬಂದಂತೆ ಮಾತನಾಡಿ ಅವಮಾನ ಮಾಡಿದ್ದ ಮೂವರು ನಾಯಕರಿಗೆ ಇಂದು ಹೀನಾಯ ಸೋಲು ಬಂದೊದಗಿದೆ. ಒಂದು ನಿರ್ದಿಷ್ಟ ಸಮುದಾಯವನ್ನು ಮೆಚ್ಚಿಸಲು ಅವರು ಸನಾತನವನ್ನು ಹೀಗಳೆದು ನಿಂದಿಸಿದ್ದಕ್ಕೆ ಇಂದು ರಾಜಕೀಯವಾಗಿ ಸೈಡ್‌ಲೈನ್ ಆಗಿದ್ದಾರೆ. ಮಿಂಚಿನ ರಾಜಕಾರಣಿಗಳಾಗಿ ಮಿಂಚಬೇಕಿದ್ದವರನ್ನು ಮತದಾರ ಪ್ರಭುಗಳು ಅಧಿಕಾರದಿಂದ ಕೆಳಗಿಳಿಸಿ ನಡೀರಿ ಮನೆಗೆ ಎಂದಿದ್ದಾರೆ.

ಕಳೆದ ವರ್ಷ ಅಂದ್ರೆ 2025ರ ಮಾರ್ಚ್ ತಿಂಗಳ ರಂಜಾನ್ ಆಚರಣೆ ವೇಳೆ ಪಶ್ಚಿಮ ಬಂಗಾಳದ ಸಿಎಂ ಮಮತಾ ದೀದಿ ಕೋಲ್ಕತ್ತಾದಲ್ಲಿ ಮಾತನಾಡಿದ್ದರು. ಈ ವೇಳೆ ' ನಾವು ಗಂಧಿ ಧರ್ಮ ಅಂದ್ರೆ ಕೊಳಕು ಧರ್ಮವನ್ನು ಪಾಲಿಸೋದಿಲ್ಲ' ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಆಗ ಬಿಜೆಪಿ ನಾಯಕರು ದೀದಿಯ ಈ ಹೇಳಿಕೆ ವಿರುದ್ಧ ಕೆಂಡಾಮಂಡಲರಾಗಿದ್ದರು. ಈಗ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಸ್ಥಾನದಲ್ಲಿದ್ದ ಮಮತಾ ದೀದಿಯ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ ಮತದಾರರು ಸೀದಾ ಮನೆಗೆ ಕಳುಹಿಸಿದ್ದಾರೆ.

ಅದರಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ ಕಳೆದ ವರ್ಷ ಅಂದ್ರೆ 2025ರ ಜನವರಿ 1 ರಂದು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಜಾತಿ ಆಧಾರಿತ ಸನಾತನ ಧರ್ಮವನ್ನು ನಾವು ಒಪ್ಪೋದಿಲ್ಲ. ಇಲ್ಲಿ ವರ್ಣಾಶ್ರಮ ಪದ್ಧತಿ ಇದೆ. ಬ್ರಾಹ್ಮಣತ್ವ ಇದೆ. ಈ ರೀತಿಯ ಪದ್ಧತಿಗಳನ್ನು ನಾರಾಯಣ ಗುರು ವಿರೋಧಿಸಿದ್ದರು. ಹೀಗಾಗಿ ಅವರಿಗೂ ಸನಾತನ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈಗ ಕೇರಳದ ಮತದಾರ ಪ್ರಭುಗಳು ಪಿಣರಾಯಿ ವಿಜಯನ್ ಅವರನ್ನು ಅವರ ಕ್ಷೇತ್ರದಿಂದ ಗೆಲ್ಲಿಸಿದ್ರೂ ಎಲ್‌ಡಿಎಫ್ ಬಣವನ್ನು ಅಧಿಕಾರದಿಂದ ದೂರ ಇರಿಸಿದ್ದಾರೆ.

ಉಳಿದಂತೆ ಸನಾತನ ಧರ್ಮ ಡೆಂಗ್ಯೂ ಮಲೇರಿಯಾ ಇದ್ದಂತೆ ಎಂದು 2024ರಲ್ಲಿ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿದ್ದರು. ತಮ್ಮ ಪುತ್ರನ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಎಂ.ಕೆ ಸ್ಟಾಲಿನ್ ಈ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಈಗ ತಮಿಳುನಾಡಿನ ಜನತೆ ಸಿಎಂ ಸ್ಥಾನದಲ್ಲಿದ್ದ ಸ್ಟಾಲಿನ್ ಅವರನ್ನೂ ಕೊಳತ್ತೂರು ಕ್ಷೇತ್ರದಿಂದ ಪರಾಭವಗೊಳಿಸಿದ್ದಾರೆ.

ಈ ರೀತಿ 'ಸನಾತನ'ದ ವಿರುದ್ಧ ಮಾತನಾಡಿ ಜನರ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳ ಮೇಲೆ ದಾಳಿ ಮಾಡಿದ ಈ ಮೂವರು ಮುಖ್ಯಮಂತ್ರಿಗಳನ್ನು ಮತದಾರರು ಸೋಲಿನ ಕಹಿ ಉಣಿಸಿದ್ದಾರೆ.

Edited By :
PublicNext

PublicNext

04/05/2026 08:52 pm

Cinque Terre

12.96 K

Cinque Terre

1