ಚೆನ್ನೈ: ಚುನಾವಣಾ ಫಲಿತಾಂಶದಲ್ಲಿ ತನ್ನ ಪಕ್ಷವು ಗರಿಷ್ಠ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ, ಚೆನ್ನೈನಲ್ಲಿರುವ ಪೋಷಕರ ನಿವಾಸಕ್ಕೆ ವಿಜಯ್ ಭೇಟಿ ನೀಡಿದರು. ಈ ವೇಳೆ ಮನೆಯ ಹೊರಗೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಮತ್ತು ಕಾರ್ಯಕರ್ತರ ಹರ್ಷೋದ್ಗಾರಕ್ಕೆ ವಿಜಯ್ ಕೈ ಬೀಸಿ ಅಭಿನಂದನೆ ಸಲ್ಲಿಸಿದರು. ವಿಜಯ್ ಅವರ ತಂದೆ ಎಸ್.ಎ. ಚಂದ್ರಶೇಖರ್ ಮತ್ತು ತಾಯಿ ಶೋಭಾ ಅವರ ಆಶೀರ್ವಾದ ಪಡೆದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಒಟ್ಟು 234 ಕ್ಷೇತ್ರಗಳ ಪೈಕಿ ವಿಜಯ್ ಅವರ ಟಿವಿಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹಾದಿಯಲ್ಲಿದೆ. ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರ್ ಎಂಬ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್ ಭಾರಿ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ತನ್ನ ಪಕ್ಷದ ಈ ಅಮೋಘ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ವಿಜಯ್, "ಇದು ಕೇವಲ ನನ್ನ ಗೆಲುವಲ್ಲ, ಬದಲಾವಣೆಯನ್ನು ಬಯಸಿದ ತಮಿಳುನಾಡು ಜನರ ಗೆಲುವು" ಎಂದು ಭಾವನಾತ್ಮಕವಾಗಿ ನುಡಿದರು. ಸದ್ಯ ಚೆನ್ನೈ ಮತ್ತು ತಮಿಳುನಾಡಿನಾದ್ಯಂತ ಟಿವಿಕೆ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಿದ್ದಾರೆ.
PublicNext
04/05/2026 09:37 pm
LOADING...