ಕೋಲ್ಕತ್ತಾ: ಆರ್‌ಜಿ ಕರ್ ಅತ್ಯಾಚಾರ ಸಂತ್ರಸ್ತೆಯ ತಾಯಿ ಹಾಗೂ ಬಿಜೆಪಿ ಅಭ್ಯರ್ಥಿ ರತ್ನಾ ದೇಬನಾಥ್ ಪಶ್ಚಿಮ ಬಂಗಾಳದ ಪಾಣಿಹಟಿ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಪಾಣಿಹಟಿ ಕ್ಷೇತ್ರವು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅತ್ಯಂತ ಗಮನ ಸೆಳೆದ ಕ್ಷೇತ್ರಗಳಲ್ಲಿ ಒಂದಾಗಿತ್ತು. ರತ್ನಾ ದೇಬನಾಥ್ ಅವರು ಐದು ಬಾರಿ ಹಾಲಿ ಶಾಸಕರಾಗಿದ್ದ ತೀರ್ಥಂಕರ ಘೋಷ್ ಅವರ ಪುತ್ರ, ಟಿಎಂಸಿ ಅಭ್ಯರ್ಥಿ ತೀರ್ಥಂಕರ ಘೋಷ್ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ರತ್ನಾ ದೇಬನಾಥ್ ಅವರು ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಘಟನೆಗಳ ಕುರಿತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಚುನಾವಣಾ ಕಣಕ್ಕೆ ಇಳಿದಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳವು ಆಡಳಿತ ವಿಚಾರವಾಗಿ ಹಲವು ವಿರೋಧಾಭಾಸಗಳನ್ನು ಎದುರಿಸುತ್ತಿತ್ತು. ನಿರ್ದಿಷ್ಟವಾಗಿ, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಯುವ ವೈದ್ಯೆಯ ಹತ್ಯೆ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿಯಾಗಿ ರತ್ನಾ ದೇಬನಾಥ್ ಅವರು ಜನರಲ್ಲಿ ಭಾವನಾತ್ಮಕ ಬೆಂಬಲ ಗಳಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ರಾತ್ರಿ 8:45ರ ವರೆಗಿನ ಮಾಹಿತಿ ಪ್ರಕಾರ, ಬಿಜೆಪಿ 208 ಸ್ಥಾನಗಳಲ್ಲಿ, ಟಿಎಂಸಿ 79 ಸ್ಥಾನಗಳಲ್ಲಿ, ಕಾಂಗ್ರೆಸ್ 2 ಸ್ಥಾನಗಳಲ್ಲಿ, ಎಲ್‌ಇಎಫ್‌ಟಿ 2 ಸ್ಥಾನಗಳಲ್ಲಿ ಹಾಗೂ ಇತರೆ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿಗೆ ಜಯ ಲಭಿಸಿದೆ ಎಂದು ಘೋಷಿಸಲಾಗಿದೆ.
PublicNext
04/05/2026 10:41 pm