ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಸೋತು ಕಣ್ಣೀರಿಟ್ಟ ತಮಿಳುನಾಡು ಮುಖ್ಯಮಂತ್ರಿ - ಕೊಳತ್ತೂರು ಕೋಟೆಯಲ್ಲಿ ಸ್ಟಾಲಿನ್‌ಗೆ ಮುಖಭಂಗ

ಚೆನ್ನೈ: ತಮಿಳುನಾಡು ರಾಜಕೀಯ ಇತಿಹಾಸದಲ್ಲೇ ಕಂಡು ಕೇಳರಿಯದ ಮಹತ್ತರ ಬದಲಾವಣೆಯೊಂದು ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ (DMK) ಅಧಿನಾಯಕ ಎಂ. ಕೆ. ಸ್ಟಾಲಿನ್ ಅವರು ತಮ್ಮ ಭದ್ರಕೋಟೆಯಾಗಿದ್ದ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ಸೋಲು ಅನುಭವಿಸಿದ್ದಾರೆ. ಸೋಲಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಟಾಲಿನ್ ಅವರು ಭಾವುಕರಾಗಿ ಕಣ್ಣೀರಿಟ್ಟಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಭ್ಯರ್ಥಿ ವಿ. ಎಸ್. ಬಾಬು ಅವರು ಮುಖ್ಯಮಂತ್ರಿ ಸ್ಟಾಲಿನ್ ಅವರನ್ನೇ ಪರಾಭವಗೊಳಿಸುವ ಮೂಲಕ 'ಜೈಂಟ್ ಕಿಲ್ಲರ್' ಆಗಿ ಹೊರಹೊಮ್ಮಿದ್ದಾರೆ. ಕೋಲತ್ತೂರು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಟಿವಿ ಕೆ ಅಭ್ಯರ್ಥಿ ಬಾಬು ಮತ್ತು ಎಐಎಡಿಎಂಕೆ (AIADMK) ಅಭ್ಯರ್ಥಿ ಪಿ. ಸಂತಾನ ಕೃಷ್ಣನ್ ನಡುವಿನ ತೀವ್ರ ಪೈಪೋಟಿಯಲ್ಲಿ ಅಂತಿಮವಾಗಿ ವಿಜಯ್ ಅವರ ಪಕ್ಷ ಗೆಲುವಿನ ನಗೆ ಬೀರಿದೆ.

ಮತ ಎಣಿಕೆ ಕೇಂದ್ರದಲ್ಲಿ ಸೋಲಿನ ಅಂತರ ಹೆಚ್ಚಾಗುತ್ತಿದ್ದಂತೆ ಎಂ. ಕೆ. ಸ್ಟಾಲಿನ್ ಅವರು ತೀವ್ರ ನಿರಾಸೆಗೆ ಒಳಗಾದರು. ಕಳೆದ ಮೂರು ಚುನಾವಣೆಗಳಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದ ತಮ್ಮದೇ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಕೈಹಿಡಿಯದಿದ್ದಾಗ ಅವರು ಕಣ್ಣೀರು ತಡೆಯಲಾರದೆ ಭಾವುಕರಾದರು. ಈ ದೃಶ್ಯಗಳು ಟಿವಿ ಪರದೆಯ ಮೇಲೆ ಪ್ರಸಾರವಾಗುತ್ತಿದ್ದಂತೆ ಡಿಎಂಕೆ ಕಾರ್ಯಕರ್ತರು ಸ್ತಬ್ದರಾಗಿದ್ದಾರೆ.

ಕೋಲತ್ತೂರಿನ ಫಲಿತಾಂಶದ ಹೈಲೈಟ್ಸ್:

ಗೆದ್ದವರು: ವಿ. ಎಸ್ ಬಾಬು (TVK)

ಸೋತವರು: ಎಂ. ಕೆ. ಸ್ಟಾಲಿನ್ (DMK - ಹಾಲಿ ಮುಖ್ಯಮಂತ್ರಿ)

ಕ್ಷೇತ್ರದ ಹಿನ್ನೆಲೆ: 2011ರಿಂದಲೂ ಈ ಕ್ಷೇತ್ರ ಸ್ಟಾಲಿನ್ ಅವರ ಭದ್ರಕೋಟೆಯಾಗಿತ್ತು.

ಹಾಲಿ ಮುಖ್ಯಮಂತ್ರಿಯೊಬ್ಬರು ತಮ್ಮದೇ ಕ್ಷೇತ್ರದಲ್ಲಿ ಸೋಲೊಪ್ಪಿಕೊಂಡಿರುವುದು ಡಿಎಂಕೆ ಪಕ್ಷಕ್ಕೆ ಅರಗಿಸಿಕೊಳ್ಳಲಾಗದ ತೀವ್ರ ಹೊಡೆತ ನೀಡಿದೆ. ಇತ್ತ ಚೊಚ್ಚಲ ಚುನಾವಣೆಯಲ್ಲೇ ಮುಖ್ಯಮಂತ್ರಿಯನ್ನೇ ಸೋಲಿಸುವ ಮೂಲಕ ವಿಜಯ್ ಅವರ TVK ಪಕ್ಷ ತಮಿಳುನಾಡಿನ ಹೊಸ ಶಕ್ತಿಯಾಗಿ ಉದಯಿಸಿದೆ. ಈ ಫಲಿತಾಂಶವು ದ್ರಾವಿಡ ರಾಜಕಾರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆ ನೀಡಿದೆ.

"ಇದು ಕೇವಲ ವ್ಯಕ್ತಿಯ ಸೋಲಲ್ಲ, ಒಂದು ವ್ಯವಸ್ಥೆಯ ಬದಲಾವಣೆಯ ಸಂಕೇತ," ಎಂದು ವಿಜಯ್ ಅಭಿಮಾನಿಗಳು ರಾಜ್ಯಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ತಮಿಳುನಾಡು ಸರ್ಕಾರ ಯಾರ ತೆಕ್ಕೆಗೆ ಸೇರಲಿದೆ ಮತ್ತು ಸ್ಟಾಲಿನ್ ಅವರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ.

Edited By : Nagaraj Tulugeri
PublicNext

PublicNext

04/05/2026 10:29 pm

Cinque Terre

10.14 K

Cinque Terre

3

ಸಂಬಂಧಿತ ಸುದ್ದಿ