ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಕೋಲಾರದಲ್ಲಿ ಸದ್ದು ಮಾಡುತ್ತಿದೆ 300 ಕೋಟಿ ಹಗರಣ

ಕೋಲಾರ - ಕೋಲಾರ ಹಾಲು ಒಕ್ಕೂಟ ಕೋಮುಲ್ ನಲ್ಲಿ 300 ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ವಿಚಾರವಾಗಿ, ಮಾಜಿ ಶಾಸಕ ಮಂಜುನಾಥ್ ಗೌಡ ಹಾಗೂ ಕೋಮುಲ್ ಅಧ್ಯಕ್ಷ, ಶಾಸಕ ಕೆ ವೈ ನಂಜೇಗೌಡ ಮಧ್ಯೆ ವಾಕ್ಸಮರ ಮುಂದುವರೆದಿದೆ.

ಕೋಮುಲ್ ನಲ್ಲಿ, 300 ಕೋಟಿ ಹಗರಣ ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಅಂತ ಹಾಲಿ ಶಾಸಕರು ಹೇಳಿದ್ದಾರೆ. ಹಗರಣದ ಆರೋಪದಿಂದ ಮುಕ್ತರಾಗಲು ಕೂಡಲೇ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸಿಬಿಐ ತನಿಖೆಗೆ ಕೋಮುಲ್ ಸಂಸ್ಥೆಯೇ ಒಪ್ಪಿಸಲಿ, ಇಲ್ಲವಾದರೆ ಹೈಕೋರ್ಟ್ ನಲ್ಲಿ ದೂರು ದಾಖಲಿಸಿ, ಅವ್ಯವಹಾರದ ಕುರಿತು ಸಿಬಿಐ ತನಿಖೆಗೆ ನಾವೇ ಒಪ್ಪಿಸುತ್ತೇವೆ ಎಂದು ಮಾಜಿ ಶಾಸಕ ಮಂಜುನಾಥಗೌಡ ಹೇಳಿಕೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

Edited By :
PublicNext

PublicNext

05/05/2026 07:53 am

Cinque Terre

9.34 K

Cinque Terre

0