ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಜಿಲ್ಲಾಧಿಕಾರಿ ಕಚೇರಿಗೆ ಶಾಸಕ ಸುರೇಶ್ ಭೇಟಿ!

ಕೋಲಾರ : ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಮಾಜಿ ಸಚಿವ, ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಅಗಲಕೋಟೆ ಗ್ರಾಮದ ಶಾಲೆಗೆ, ದಾನಿಗಳು ನೀಡಿದ 51 ಎಕರೆ ಜಮೀನು ಪರಭಾರೆ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಟಿ ಆರೋಪ ಹಿನ್ನೆಲೆ, ಶಾಲೆ ಜಮೀನು ಉಳಿಸಿಕೊಡುವಂತೆ ಮಾಜಿ ಶಾಸಕ ಮಂಜುನಾಥಗೌಡ ಮನವಿಯ ಮೇರೆಗೆ, ಮಾಜಿ ಸಚಿವ ಸುರೇಶ್ ಕುಮಾರ್ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ದಾನಿಗಳಾದ ಟಿ.ಜಿ ಶ್ರೀನಿವಾಸಲು ಎಂಬುವರು ಶಿಕ್ಷಣ ಇಲಾಖೆಗೆ ದಾನವಾಗಿ ನೀಡಿದ್ದ 51 ಎಕರೆ ಜಮೀನನ್ನು, 1955 ರಲ್ಲಿ ಸರ್ಕಾರಿ ಶಾಲೆಗೆ ಜಮೀನನ್ನ ದಾನವಾಗಿ ನೀಡಿದ್ದರು. ಜಮೀನು ವಿವಾದ ಮುಚ್ಚಿಹಾಕಲು, ಸಹಾಯಕ ಕಮಿಷನರ್ ನೇತೃತ್ವದ ಪರಿಶೀಲನಾ ಸಮಿತಿ, ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ತಪ್ಪು ಮಾಹಿತಿ ನೀಡಿ, ಸದನದಲ್ಲಿ ಸುಳ್ಳು ಹೇಳುವಂತೆ ಮಾಡಿದ್ದಾರೆ ಎಂಬ ಆರೋಪವಿದೆ.

Edited By : Nagaraj Tulugeri
PublicNext

PublicNext

30/04/2026 10:52 pm

Cinque Terre

3.34 K

Cinque Terre

0

ಸಂಬಂಧಿತ ಸುದ್ದಿ