ಕೋಲಾರ : ಕಾನೂನು ನಿಯಮ ಮೀರಿ ಓಡಾಟ ಮಾಡ್ತಾ ಇರೋ ಲಾರಿಗಳ ಕಡಿವಾಣ ಹಾಕುವಲ್ಲಿ ಅಧಿಕಾರಿಗಳು ವಿಫಲ ಆಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಅಕ್ರಮ ಗಣಿಗಾರಿಕೆಯಿಂದಲೇ ಕುಖ್ಯಾತಿ ಪಡೆದಿರುವ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ, ಕ್ರಷರ್ ಗಳಿಂದ ಲೋಡ್ ಹೊತ್ತಿಕೊಂಡು ಓಡಾಡುವ ಟಿಪ್ಪರ್ ಲಾರಿಗಳ ಸಂಖ್ಯೆ ಎಗ್ಗಿಲ್ಲದೇ ಹೆಚ್ಚಿದೆ. ಅಲ್ಲದೇ ಕಾನೂನು ಮೀರಿ ಸಂಚಾರ ಮಾಡುತ್ತಿದ್ದರು, ಗಣಿ ಇಲಾಖೆ, ಆರ್.ಟಿ.ಒ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
ಕೋಲಾರ ನಗರದಲ್ಲಿ ಅನಧಿಕೃತವಾಗಿ ಹೆಚ್ಚು ಭಾರದೊಂದಿಗೆ ಸಂಚಾರ ಮಾಡ್ತಿದ್ದ ಟಿಪ್ಪರ್ ಲಾರಿ ಓಡಾಟವನ್ನು ಸ್ಥಳೀಯರು ಹಿಡಿದಿದ್ದಾರೆ. ಚಂಜಿಮಲೆ ಗ್ರಾಮದ ಮುನೇಶ್ ಎಂಬುವರು ತಡೆದು, ಟಿಪ್ಪರ್ ಲಾರಿಯಲ್ಲಿದ್ದ ಜೆಲ್ಲಿ ಲೋಡ್ ನ, ಬಿಲ್ ಪರಿಶೀಲನೆ ನಡೆಸಿದಾಗ, ರಸೀದಿಯಲ್ಲಿ 49.6 ಟನ್ ಎಂದು ಹಾಕಲಾಗಿದೆ, ಆದರೆ ಟಿಪ್ಪರ್ ಲಾರಿಯ ಸಾಮರ್ಥ್ಯ 26 ಟನ್ ಆಗಿದ್ದು, ಅಧಿಕ ಭಾರದ ಲಾರಿಗಳು ಓಡಾಡ್ತಿದ್ದರು ಗಣಿ ಇಲಾಖೆ ಹಾಗೂ ಆರ್.ಟಿ.ಒ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.
PublicNext
16/04/2026 09:06 am
LOADING...