ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆಯ ಫಲಿತಾಂಶಗಳು ಹೊರಬಿದ್ದಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಅಲ್ಲದೆ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ವರದಾನ?
ಪಶ್ಚಿಮ ಬಂಗಾಳದಲ್ಲಿ ಆದ ದಾಖಲೆಯ ಮತದಾನ ಬಿಜೆಪಿಗೆ ವರದಾನವಾಗುವ ಸರ್ವ ಲಕ್ಷಣಗಳು ಗೋಚರಿಸುತ್ತಿವೆ. ಬಹುತೇಕ ಸಮೀಕ್ಷೆಗಳು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
* ಟೈಮ್ಸ್ ನೌ: ಬಿಜೆಪಿ 138-159, ಟಿಎಂಸಿ 131-152, ಇತರೆ 01
* ಮ್ಯಾಟ್ರಿಜ್: ಬಿಜೆಪಿ 146-161, ಟಿಎಂಸಿ 125-140, ಇತರೆ 6-10
* ಪಿಮಾರ್ಕ್: ಬಿಜೆಪಿ 150-175, ಟಿಎಂಸಿ 118-138, ಕಾಂಗ್ರೆಸ್ 2-6, ಇತರೆ 00
* ಸ್ಮಾರ್ಟ್ ಪೋಲ್: ಬಿಜೆಪಿ 154, ಟಿಎಂಸಿ 136, ಕಾಂಗ್ರೆಸ್ 1, ಇತರೆ 3
ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ?
ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ 10-15 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಎಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಟಿವಿಕೆ ಬಂಪರ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.
* ಎಕ್ಸಿಸ್ ಮೈ ಇಂಡಿಯಾ: ಟಿವಿಕೆ 98-120, ಡಿಎಂಕೆ 92-110, ಎಐಎಡಿಎಂಕೆ 22-32
* ಚಾಣಕ್ಯ ಸ್ಟ್ರ್ಯಾಟಜಿ: ಡಿಎಂಕೆ 145-160, ಎಐಎಡಿಎಂಕೆ 50-65, ಇತರೆ 18-26
* ಪಿಮಾರ್ಕ್: ಡಿಎಂಕೆ 125-145, ಎಐಎಡಿಎಂಕೆ 65-85, ಟಿವಿಕೆ 16-26, ಇತರೆ 1-6
* ಸ್ಮಾರ್ಟ್ ಪೋಲ್: ಡಿಎಂಕೆ 180, ಎಐಎಡಿಎಂಕೆ 28, ಟಿವಿಕೆ 26, ಇತರೆ 00
ಕೇರಳದಲ್ಲಿ ಯುಡಿಎಫ್ ಮರಳಿ ಅಧಿಕಾರಕ್ಕೆ?
ಕೇರಳದಲ್ಲಿ ಎಲ್‌ಡಿಎಫ್ ಹಾಗೂ ಯುಡಿಎಫ್ ನಡುವೆ ತೀವ್ರ ಪೈಪೋಟಿ ಇದ್ದರೂ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ 10 ವರ್ಷಗಳ ನಂತರ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ಸೂಚಿಸಿವೆ.
* ಸ್ಮಾರ್ಟ್ ಪೋಲ್: ಯುಡಿಎಫ್ 85, ಎಲ್‌ಡಿಎಫ್ 51, ಬಿಜೆಪಿ 3, ಇತರೆ 1
* ಎಕ್ಸಿಸ್ ಮೈ ಇಂಡಿಯಾ: ಎಲ್‌ಡಿಎಫ್ 49-62, ಯುಡಿಎಫ್ 78-90, ಬಿಜೆಪಿ 0-3, ಇತರೆ 00
* ಟೈಮ್ಸ್ ನೌ: ಎಲ್‌ಡಿಎಫ್ 52-61, ಯುಡಿಎಫ್ 72-84, ಬಿಜೆಪಿ 3-7, ಇತರೆ 00
* ಮ್ಯಾಟ್ರಿಜ್: ಎಲ್‌ಡಿಎಫ್ 60-65, ಯುಡಿಎಫ್ 70-75, ಬಿಜೆಪಿ 3-5, ಇತರೆ 2-4
ಅಸ್ಸಾಂನಲ್ಲಿ ಎನ್‌ಡಿಎಗೆ ಬಹುಮತ?
ಅಸ್ಸಾಂನಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂದು ಅಂದಾಜಿಸಲಾಗಿದೆ. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಸಹ ಉತ್ತಮ ಪ್ರದರ್ಶನ ನೀಡಬಹುದು ಎಂದು ಹೇಳಿವೆ.
* ಎಕ್ಸಿಸ್ ಮೈ ಇಂಡಿಯಾ: ಎನ್‌ಡಿಎ 88-100, ಇತರೆ 24-36
* ಪೋಲ್ ಡೈರಿ: ಎನ್‌ಡಿಎ 86-101, ಕಾಂಗ್ರೆಸ್ 15-26, ಎಯುಡಿಎಫ್ 2-5
* ಟೈಮ್ಸ್ ನೌ: ಬಿಜೆಪಿ 88-101, ಕಾಂಗ್ರೆಸ್ 23-33, ಇತರೆ 02-05
* ಪಿಮಾರ್ಕ್: ಬಿಜೆಪಿ 82-94, ಕಾಂಗ್ರೆಸ್ 30-40, ಇತರೆ 1-5
ಪುದುಚೇರಿಯಲ್ಲಿ ಎನ್‌ಡಿಎ ಸರ್ಕಾರ?
ಪುದುಚೇರಿಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
* ಎಕ್ಸಿಸ್ ಮೈ ಇಂಡಿಯಾ: ಬಿಜೆಪಿ 16-20, ಕಾಂಗ್ರೆಸ್ 6-8, ಇತರೆ 3-7
* ಪೀಪಲ್ಸ್ ಪಲ್ಸ್: ಬಿಜೆಪಿ 16-19, ಕಾಂಗ್ರೆಸ್ 10-12, ಇತರೆ 1-2
* ಪ್ರಜಾ ಪೋಲ್: ಬಿಜೆಪಿ 19-25, ಕಾಂಗ್ರೆಸ್ 6-8, ಇತರೆ 00
PublicNext
30/04/2026 07:36 am