ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳುನಾಡಿನಲ್ಲಿ ಡಿಎಂಕೆಗೆ ಮತ್ತೆ ಪಟ್ಟ : ದಳಪತಿ ಟಿವಿಕೆಗೆ ಹೀನಾಯ ಸೋಲು.? ಸಮೀಕ್ಷೆಗಳಲ್ಲಿ ಭಾರಿ ಟ್ವಿಸ್ಟ್!

ಚೆನ್ನೈ: ತಮಿಳುನಾಡಿನಲ್ಲಿ ನಡೆಯಲಿರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಟುಡೇಸ್‌ ಚಾಣಕ್ಯ ಸಮೀಕ್ಷೆ ಭವಿಷ್ಯ ನುಡಿದಿದೆ.

ರಾಜಕೀಯ ಸಮೀಕ್ಷೆಗಳಿಗೆ ಹೆಸರುವಾಸಿಯಾದ ಟುಡೇಸ್‌ ಚಾಣಕ್ಯ ಸಂಸ್ಥೆಯು, ಸಾಮಾನ್ಯವಾಗಿ ಒಂದೇ ಪಕ್ಷಕ್ಕೆ ಸತತವಾಗಿ ಅಧಿಕಾರ ನೀಡದ ತಮಿಳುನಾಡಿನ ಮತದಾರರು ಈ ಬಾರಿ ಡಿಎಂಕೆ ಮೈತ್ರಿಕೂಟವನ್ನು ಮತ್ತೆ ಅಧಿಕಾರಕ್ಕೆ ತರುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.

ಸಮೀಕ್ಷೆಯ ಪ್ರಕಾರ, 2026ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟ 125 ರಿಂದ 145 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಎಐಎಡಿಎಂಕೆ ಮೈತ್ರಿಕೂಟ 65 ರಿಂದ 80 ಸ್ಥಾನಗಳನ್ನು ಪಡೆಯಬಹುದು. ಇನ್ನು, ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವ ದಳಪತಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷವು 18 ರಿಂದ 24 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇತರರು 2 ಸ್ಥಾನಗಳನ್ನು ಪಡೆಯಬಹುದು ಎಂದು ಭವಿಷ್ಯ ನುಡಿದಿದೆ. ಬಹುಮತಕ್ಕೆ 118 ಸ್ಥಾನಗಳು ಬೇಕಾಗಿವೆ.

ಜೆವಿಸಿ ಸಮೀಕ್ಷೆಯು ಡಿಎಂಕೆ ಮೈತ್ರಿಕೂಟಕ್ಕೆ 75 ರಿಂದ 95 ಸ್ಥಾನಗಳು, ಎಐಎಡಿಎಂಕೆ ಮೈತ್ರಿಕೂಟಕ್ಕೆ 128 ರಿಂದ 147 ಸ್ಥಾನಗಳು ಹಾಗೂ ಟಿವಿಕೆಗೆ 8 ರಿಂದ 15 ಸ್ಥಾನಗಳು ಬರಬಹುದು ಎಂದು ಅಂದಾಜಿಸಿದೆ.

ಪಿ-ಮಾರ್ಕ್‌ ಸಮೀಕ್ಷೆಯು ಡಿಎಂಕೆ ಮೈತ್ರಿಕೂಟಕ್ಕೆ 125 ರಿಂದ 145 ಸ್ಥಾನಗಳು ಮತ್ತು ಎಐಎಡಿಎಂಕೆ ಮೈತ್ರಿಕೂಟಕ್ಕೆ 65 ರಿಂದ 85 ಸ್ಥಾನಗಳು ದೊರೆಯಬಹುದು ಎಂದು ಹೇಳಿದೆ. ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ದಳಪತಿ ವಿಜಯ್‌ ನೇತೃತ್ವದ ಟಿವಿಕೆ 16 ರಿಂದ 26 ಸ್ಥಾನಗಳನ್ನು ಗಳಿಸಬಹುದು ಎಂದು ತಿಳಿಸಿದೆ.

ಜೀ ನ್ಯೂಸ್‌ ಸಮೀಕ್ಷೆಯು ಡಿಎಂಕೆ ಮೈತ್ರಿಕೂಟ 140 ರಿಂದ 162 ಸ್ಥಾನಗಳನ್ನು, ಎಐಎಡಿಎಂಕೆ ಮೈತ್ರಿಕೂಟ 52 ರಿಂದ 74 ಸ್ಥಾನಗಳನ್ನು ಹಾಗೂ ಇತರರು 13 ರಿಂದ 33 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಿದೆ.

Edited By :
PublicNext

PublicNext

30/04/2026 06:41 pm

Cinque Terre

9.76 K

Cinque Terre

0

ಸಂಬಂಧಿತ ಸುದ್ದಿ