ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಸದ್ಯ ಚೆನ್ನಾಗೇ ನಡೀತಿದೆ. ಅಧಿಕಾರ ಹಸ್ತಾಂತರ ಮಾಡ್ತಾರೋ? ಇಲ್ಲವೋ ನನಗೆ ಗೊತ್ತಿಲ್ಲ.. ಆದರೆ, ನಮ್ಮ ಪಕ್ಷದ ಹೈಕಮಾಂಡ್ ಈ ಚರ್ಚೆಗೆ ಒಂದು ಅಂತ್ಯ ಹಾಡಬೇಕು. ಅಧಿಕಾರ ಹಸ್ತಾಂತರ ಮಾಡಬೇಕೆಂದು ನಮ್ಮ ಪಕ್ಷದಲ್ಲಿ ಯಾರೂ ಹೈಕಮಾಂಡ್ ಗೆ ಡೆಡ್ ಲೈನ್ ನನ್ನೂ ಕೊಟ್ಟಿಲ್ಲ.. ಸಂಪುಟ ಪುನರ್ ರಚನೆ ಮಾಡಬೇಕು.. ಪಕ್ಷದಲ್ಲಿನ ಎಲ್ಲ ಹಿರಿಯ ಶಾಸಕರಿಗೂ ಸಚಿವರಾಗೋ ಅವಕಾಶ ಸಿಗಬೇಕು.. ಒಂದೊಮ್ಮೆ ನನಗೆ ಸಚಿವ ಸ್ಥಾನ ಬಿಟ್ಟುಕೊಡಿ ಎಂದು ಹೈಕಮಾಂಡ್ ಹೇಳಿದರೆ ವರಿಷ್ಠರ ಮಾತಿಗೆ ನಾನು ಬದ್ಧನಾಗಿರಬೇಕಾಗುತ್ತೆ.. ಒಬ್ಬ ಶಾಸಕನಾಗಿಯೂ ಜನರ ಕೆಲಸ ಮಾಡುವೆ. ಆ ಬಗ್ಗೆ ನನಗಾವ ಟೆನ್ಶನ್ ಇಲ್ಲ. ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ಮನದಾಳದ ಮಾತು.
ಇಂದು ಗಾಂಧಿನಗರದ ಅವರ ಕಚೇರಿಯಲ್ಲಿ 'ಪಬ್ಲಿಕ್ ನೆಕ್ಸ್ಟ್'ನ ವೀಕ್ಷಕರಿಗಾಗಿ ನಮ್ಮ ಪ್ರತಿನಿಧಿ ಚೆನ್ನವೀರ ಸಗರನಾಳ್ ಅವರು ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದು, ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
PublicNext
30/04/2026 06:55 pm
LOADING...