ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ-ಶಾ ತಂತ್ರಕ್ಕೆ ದೀದಿ ಕೋಟೆ ಛಿದ್ರ : ಬಂಗಾಳದಲ್ಲಿ ಗೆಲುವು - ಸಮೀಕ್ಷೆ ಭವಿಷ್ಯ!

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಕಾತರ ಹೆಚ್ಚಿರುವ ಬೆನ್ನಲ್ಲೇ, ಟುಡೇಸ್‌ ಚಾಣಕ್ಯ ಚುನಾವಣೋತ್ತರ ಸಮೀಕ್ಷೆಯು ಮಹತ್ವದ ಭವಿಷ್ಯ ನುಡಿದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ತಂತ್ರಗಾರಿಕೆ ಫಲಿಸಿದ್ದು, ಬಿಜೆಪಿ ಈ ಬಾರಿ ಅಧಿಕಾರದ ಗದ್ದುಗೆ ಏರುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಪ್ರಕಾರ, ಬಿಜೆಪಿ 192 ± 11 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಬಹುಮತದೊಂದಿಗೆ ಅಧಿಕಾರ ಹಿಡಿಯಲಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (TMC) 100 ± 11 ಸ್ಥಾನಗಳನ್ನು ಗಳಿಸಲಿದ್ದು, ಇತರರು ಕೇವಲ 2 ± 2 ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಿದೆ. ಮತಗಳಿಕೆಯಲ್ಲಿ, ಬಿಜೆಪಿ 48% ± 3% ಪಾಲು ಪಡೆಯುವ ನಿರೀಕ್ಷೆಯಿದ್ದರೆ, ಟಿಎಂಸಿ 38% ± 3% ಮತ್ತು ಇತರರು 14% ± 3% ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.

2021ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳ ಪೈಕಿ ಟಿಎಂಸಿ 215 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಸಾಧಿಸಿತ್ತು. ಬಿಜೆಪಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ರಾಷ್ಟ್ರೀಯ ಸೆಕ್ಯುಲರ್ ಮಜ್ಲಿಸ್ ಪಾರ್ಟಿ (RSMP) 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಯಾವುದೇ ಸ್ಥಾನವನ್ನು ಗೆಲ್ಲಲು ವಿಫಲವಾಗಿದ್ದವು.

ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇರುವ ಬಗ್ಗೆ ಇತರ ಚುನಾವಣೋತ್ತರ ಸಮೀಕ್ಷೆಗಳೂ ಭವಿಷ್ಯ ನುಡಿದಿವೆ. ಬಂಗಾಳದ ಬಿಗ್ ಬಾಸ್ ಯಾರು ಎಂಬುದಕ್ಕೆ ಫಲಿತಾಂಶದ ದಿನವೇ ಸ್ಪಷ್ಟ ಉತ್ತರ ಸಿಗಲಿದೆ. ಇತರೆ ಪ್ರಮುಖ ಸಮೀಕ್ಷೆಗಳ ಅಂದಾಜು ಹೀಗಿದೆ.

ಮ್ಯಾಟ್ರಿಕ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ: 146-161 ಟಿಎಂಸಿ: 125-140 ಇತರೆ 6-10

ಪಿ-ಮಾರ್ಕ್ ಸಮೀಕ್ಷೆ ಪ್ರಕಾರ ಬಿಜೆಪಿ: 150-175 ಟಿಎಂಸಿ: 116 ಕಾಂಗ್ರೆಸ್: 2-6 ಇತರೆ - 00

ಸ್ಮಾರ್ಟ್ ಪೋಲ್ ಸಮೀಕ್ಷೆ ಪ್ರಕಾರ ಬಿಜೆಪಿ: 154 ಟಿಎಂಸಿ: 136 ಕಾಂಗ್ರೆಸ್: 1 ಇತರೆ : 3

ಪೀಪಲ್ಸ್ ಪಲ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ: 95-110 ಟಿಎಂಸಿ: 177 – 187 ಕಾಂಗ್ರೆಸ್: 1-3 ಇತರೆ 1

Edited By :
PublicNext

PublicNext

30/04/2026 07:37 pm

Cinque Terre

13.35 K

Cinque Terre

4

ಸಂಬಂಧಿತ ಸುದ್ದಿ