ಮೈಸೂರು: 2025ನೇ ಸಾಲಿನ ದಸರಾದ ಖರ್ಚು ವೆಚ್ಚ ಹಾಗೂ ಗೋಲ್ಡ್ ಪಾಸ್‌ಗಳ ಸಂಪೂರ್ಣ ಲೆಕ್ಕ ಕೊಡುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ವಕೀಲ ರವಿ ಕುಮಾರ್ ಅರ್ಜಿ ಹಾಕಿದ್ದಾರೆ.
ದಸರಾ ಕಳೆದ 6 ತಿಂಗಳು ಕಳೆದಿದೆ ಈ ಬಾರಿ ಸರ್ಕಾರ ದಸರಾಗೆ 40ಕೋಟಿ ಹಣ ಕೊಟ್ಟಿದ್ದು ಪ್ರಾಯೋಜಕರು ಕೂಡ ಕೋಟಿ ಕೋಟಿ ಹಣ ನೀಡಿದ್ದಾರೆ. ಇಷ್ಟು ತಿಂಗಳು ಕಳೆದರು ಜಿಲ್ಲಾಡಳಿತ ಯಾವುದೇ ಲೆಕ್ಕ ಕೊಟ್ಟಿಲ್ಲ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ದಸರಾದ ಲೆಕ್ಕಾಚಾರದ ಕುರಿತು ಚರ್ಚೆಯಾಗುತ್ತಿದೆ. ದಸರಾದ ಸಂಪೂರ್ಣ ಲೆಕ್ಕ ಕೊಡುವಂತೆ ವಕೀಲರು ಆರ್.ಟಿ.ಐ ಅರ್ಜಿ ಹಾಕಿದ್ದು ಜಿಲ್ಲಾಡಳಿತ ಸಾರ್ವಜನಿಕವಾಗಿ ಲೆಕ್ಕ ಮುಂದಿಡುತ್ತಾ? ಅಥವಾ ಕಳ್ಳಾಟ ಮುಂದುವರೆಸುತ್ತಾ? ಎನ್ನುವ ಪ್ರಶ್ನೆ ಎದ್ದಿದೆ.
PublicNext
30/04/2026 09:03 pm
LOADING...