ಕೋಲಾರ: ತೋಟದಲ್ಲಿ ಬೆಳೆ ಕಟಾವಿಗೆ ತೆರಳಿದ್ದ ರೈತನ ಮನೆಯಲ್ಲಿ, ಕಳ್ಳರು ಕೈಚಳಕ ತೋರಿಸಿರುವ ಘಟನೆ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಎನ್ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ರೈತ ಯರ್ರಪ್ಪ ಎಂಬುವರ ತೋಟದಲ್ಲಿ ಬೆಳೆದಿದ್ದ ಗೆಣಸು ಕಟಾವಿಗೆ, ಪತ್ನಿ ಹಾಗು ಮಗನೊಂದಿಗೆ ತೆರಳಿದ್ದರು.
ಈ ವೇಳೆ ಹಾಡಹಗಲೆ ಹೊಂಚು ಹಾಕಿದ್ದ ಕಳ್ಳರು, ಮನೆಯ ಬೀಗ ಒಡೆದು, ಬೀರುದಲ್ಲಿದ್ದ ಬಂಗಾರದ ಸರ, ಒಂದು ಚಂದ್ರಹಾರ, 2 ಜೊತೆ ಓಲೆ, 2 ಉಂಗುರ ಹಾಗು 1.40 ಲಕ್ಷ ನಗದು ಕದ್ದಿದ್ದಾರೆ. ಈ ಬಗ್ಗೆ ರೈತ ಯರ್ರಪ್ಪ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
21/04/2026 08:29 am
LOADING...