ಕೋಲಾರ - ಕೋಲಾರ ಜಿಲ್ಲೆಯ ಕೆಜಿಎಫ್ ಪೊಲೀಸ್ ಇಲಾಖೆ ಅಧಿಕಾರಿಗಳು, ರೌಡಿ ಶೀಟರ್ ಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಮುಂದುವರೆಸಿದ್ದಾರೆ.
ಕೆಜಿಎಫ್ ನಗರದ ಆಂಡ್ರಸನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿರುವ, ಅಭಿಶೇಕ್ ಎಂಬಾತ, ಆರು ಕೊಲೆಯತ್ನ ಹಾಗೂ ಹಲ್ಲೆ ಪ್ರಕರಣದ ಆರೋಪಿಯಾಗಿದ್ದಾನೆ. ಆದರೆ ನ್ಯಾಯಾಲಯದಿಂದ ಜಾಮೀನು ಪಡೆದು, ಮರಳಿ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗ್ತಿರೊ ಹಿನ್ನೆಲೆ, ಆರೋಪಿ ಅಭಿಶೇಕ್ ನನ್ನು ಬಂದಿಸಿದ ಪೊಲೀಸರು, ಹಾವೇರಿ ನಗರಕ್ಕೆ ಗಡಿಪಾರು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್.ಪಿ ಶಿವಾಂಶು ರಜಪೂತ್ ಮಾಹಿತಿ ನೀಡಿದ್ದಾರೆ.
Kshetra Samachara
19/04/2026 10:15 am
LOADING...