ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ಮಾವಿನ ಕಾಯಿ ಕೀಳುವ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ!

ಕೋಲಾರ : ಮಾವಿನ ಕಾಯಿ ಕೀಳುವ ವಿಚಾರಕ್ಕೆ

ಎರಡು ಗುಂಪುಗಳ ನಡುವೆ ಭೀಕರ ಗಲಾಟೆ ನಡೆದು ಹೊಡೆದಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಆಲಂಬಗಿರಿ ಗ್ರಾಮದಲ್ಲಿ ನಡೆದಿದೆ.

ಆಟೋ ಚಾಲಕ ಸಾಧಿಕ್ ಅಹಮದ್ ಮಾವಿನ ಕಾಯಿ ಕಿತ್ತಿರುವ ವಿಚಾರಕ್ಕೆ, ತೋಟದ ಮಾಲೀಕ ಮಂಜುನಾಥ್ ಎಂಬುವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆಟೋ ಚಾಲಕ ಸಾಧಿಕ್ ಅಹಮದ್ ಪರವಾಗಿ ಕುಟುಂಬಸ್ಥರು ಮಾತನಾಡಿದ್ದಕ್ಕೆ, ಮಂಜುನಾಥ್ ಹಾಗೂ ಕುಟುಂಬಸ್ಥರು ಸಾಧಿಕ್ ಅಹಮದ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ಸಹೋದರಿ ಮೇಲೆಯೂ ಹಲ್ಲೆ ನಡೆಸಿದ್ದಾರೆ.

ಗಲಾಟೆ ವೇಳೆ ಮಂಜುನಾಥ್ ಗೆ ಬೆಂಬಲವಾಗಿ ಗ್ರಾಮದ 40 ಜನರ ಗುಂಪು ಸೇರಿ ಏಕಾಏಕಿ ಹಲ್ಲೆ ನಡೆಸಿದ್ದು, ಸಹೋದರಿಯ ಬುರ್ಖಾ ಹರಿದು ಹಲ್ಲೆ ಮಾಡಿದ್ದಾರೆ ಎಂದು ಸಾಧಿಕ್ ಅಹಮದ್ ಆರೋಪಿಸಿದ್ದು, ಗಲಾಟೆಯಲ್ಲಿ ಆಟೋ ಗಾಜು ಪುಡಿಪುಡಿ ಮಾಡಲಾಗಿದೆ.

ಘಟನೆ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

26/04/2026 04:39 pm

Cinque Terre

18.07 K

Cinque Terre

0

ಸಂಬಂಧಿತ ಸುದ್ದಿ