ಕೋಲಾರ - ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ, ರೌಡಿ ಶೀಟರ್ ಗಳ ವಿರುದ್ಧ, ಪೊಲೀಸ್ ಇಲಾಖೆ ಕೈಗೊಂಡಿರುವ ರೌಡಿ ಮುಕ್ತ ಕೆಜಿಎಫ್ ಕಾರ್ಯಾಚರಣೆ ಮುಂದುವರೆದಿದೆ.
ತಡರಾತ್ರಿ ಕೆಜಿಎಫ್ ಎಸ್.ಪಿ ಶಿವಾಂಶು ರಜಪೂತ್ ನೇತೃತ್ವದಲ್ಲಿ, 60 ಪೊಲೀಸರು 5 ತಂಡಗಳಾಗಿ ಬೇರ್ಪಟ್ಟು, ರಾಬರ್ಟ್ ಸನ್ ಪೇಟೆ, ಆಂಡ್ರಸನ್ ಪೇಟೆ, ಉರಿಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ, ಮನೆಗಳನ್ನು ಪರಿಶೀಲನೆ ನಡೆಸಿದ್ದಾರೆ, ಪೊಲೀಸರ ದಾಳಿ ವೇಳೆ ಜಯಕಾಂತ ಎಂಬ ರೌಡಿ ಶೀಟರ್ ಮನೆಯಲ್ಲಿ ಎರಡು ಲಾಂಗ್ ಗಳು ಪತ್ತೆಯಾಗಿದೆ, ಇನ್ನು ಶರತ್ ಕುಮಾರ್ ಎಂಬ ರೌಡಿಶೀಟರ್ ಮನೆಯಲ್ಲಿ ಒಂದು ಲಾಂಗ್ ಪತ್ತೆಯಾಗಿದೆ, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಕೆಜಿಎಫ್ ಎಸ್.ಪಿ ಮಾಹಿತಿ ನೀಡಿದ್ದಾರೆ.
PublicNext
20/04/2026 10:40 am
LOADING...