ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ನಾಯಕರಿಂದ ಸಮಾಜದ ನಾಯಕನಿಗೆ ಅಗೌರವ!

ಕೋಲಾರ - ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ MLC ನಸೀರ್ ಅಹಮದ್ ವಜಾ ಮಾಡಿರುವ ಕ್ರಮವನ್ನ, ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಖಂಡಿಸಿದ್ದಾರೆ.

ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ, ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲೆಯ ಹಿರಿಯ ಅಲ್ಪಸಂಖ್ಯಾತ ನಾಯಕ ನಸೀರ್ ಅಹ್ಮದ್ ರನ್ನು, ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡುವ ಮೂಲಕ, ಕಾಂಗ್ರೆಸ್ ಹೈ ಕಮಾಂಡ್ ಒಂದು ಸಮಾಜದ ನಾಯಕನಿಗೆ ಅಗೌರವ ತೋರಿದೆ ಎಂದು ದ್ರಾವಿಡ ವಿಮೋಚನಾ ಸಂಘದ ಅಧ್ಯಕ್ಷ ಅನಂತಕೀರ್ತಿ ಆರೋಪಿಸಿದ್ದಾರೆ.

2024 ರ ಲೋಕಸಭೆ ಚುನಾವಣೆ ವೇಳೆ, ಕೋಲಾರ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು, ಓರ್ವ ಎಮ್.ಎಲ್.ಸಿ ಪಕ್ಷದ ತೀರ್ಮಾನದ ವಿರುದ್ಧ ಭುಗಿಲೆದ್ದು, ರಾಜೀನಾಮೆ ನಾಟಕವಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ಧಾರದ ವಿರುದ್ಧವೇ ತಿರುಗಿಬಿದ್ದಿದ್ದರು.

ಆದರೆ ಅಂದು ಪಕ್ಷದ ವಿರುದ್ಧ ಮಾತನಾಡಿದವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಿಲ್ಲ, ಇದೀಗ ಅಲ್ಪಸಂಖ್ಯಾತ ನಾಯಕ ನಸೀರ್ ಅಹ್ಮದ್ ವಿರುದ್ಧ ಕ್ರಮ ಖಂಡನೀಯ ಎಂದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ವಿವಿಧ ಸಂಘಟನೆಗಳ ಮುಖಂಡರು ಕಿಡಿಕಾರಿದ್ದಾರೆ.

Edited By :
PublicNext

PublicNext

19/04/2026 12:41 pm

Cinque Terre

12.83 K

Cinque Terre

0