ಬ್ರಹ್ಮಾವರ: ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಮನೆ ಕೆಲಸದಾಕೆ ಕಳವು ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೂರಿನ ಆಶಾ ಎಸ್.ಪೂಜಾರಿ ಎಂಬವರು ಹೇರೂರು ಗ್ರಾಮದಲ್ಲಿರುವ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ಆರೂರಿನ ಲತಾ ಎಂಬವರನ್ನು ನೇಮಿಸಿದ್ದು, ಮನೆಯ ಕಪಾಟಿನಲ್ಲಿಟ್ಟಿದ್ದ ತಂದೆಯ 25 ಗ್ರಾಂ ತೂಕದ ಚಿನ್ನದ ಬ್ರಾಸ್ಲೇಟ್ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ ಕಳವಾಗಿರುವುದು ಕಂಡುಬಂದಿದೆ.
ಬಳಿಕ ಮನೆ ಕೆಲಸದಾಕೆ ಲತಾಳನ್ನು ವಿಚಾರಿಸಿದಾಗ ತಾನು ಚಿನ್ನವನ್ನು ತೆಗೆದು ಅಡವಿಟ್ಟಿರುವುದಾಗಿ ತಿಳಿಸಿದ್ದು, ಅದನ್ನು ಬಿಡಿಸಿ ಕೊಡುವುದಾಗಿ ಹೇಳಿದ್ದಳು. ಆದರೆ ಲತಾ ಚಿನ್ನವನ್ನು ಬಿಡಿಸಿಕೊಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಕಳವಾದ ಚಿನ್ನದ ಮೌಲ್ಯ 3,50,000 ರೂ. ಎಂದು ಅಂದಾಜಿಸಲಾಗಿದೆ.
PublicNext
05/05/2026 11:23 am
LOADING...