ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ಲಾಭ ನೀಡುವ ಆಮಿಷ ಒಡ್ಡಿ ವೃದ್ದಗೆ 18.81 ಲಕ್ಷ ರೂ.ಗಳ ಭಾರೀ ವಂಚನೆ

ಮಂಗಳೂರು: ಮಂಗಳೂರಿನಲ್ಲಿ ವಂಚನೆಯ ಪ್ರಕರಣ ನಿತ್ಯ ಒಂದಲ್ಲ ಒಂದು ಬೆಳಕಿಗೆ ಬರುತ್ತಲೇ ಇವೆ. ಎಷ್ಟೇ ಅ ಜಾಗೃತಿ ಕಾರ್ಯ ನಡೆದರೂ ಮೋಸ ಹೋಗುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

ಇದೀಗ ವೃದ್ಧರೊಬ್ಬರನ್ನು ನಂಬಿಸಿ 18.81 ಲಕ್ಷ ರೂ ವಂಚಿಸಲಾಗಿದೆ. ಆನ್‌ಲೈನ್ ಟ್ರೇಡಿಂಗ್‌ನಿಂದ ಅಧಿಕ ಲಾಭದ ಅಮಿಷದಿಂದ ವಂಚಿಲಾಗಿದ್ದು, ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. 75 ವರ್ಷದ ಹಿರಿಯ ನಾಗರಿಕರು ವಂಚನೆಗೆ ಒಳಗಾದವರು. 2025ರ ಡಿ.6ರಂದು ಮೊಬೈಲ್‌ನಲ್ಲಿ ನೋಡುತ್ತಿರುವಾಗ ಆನ್‌ಲೈನ್ ಟ್ರೇಡಿಂಗ್ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣ ಇರುವ ವಿಡಿಯೋ ವನ್ನು ಕಂಡು ಬಂದಿದೆ. ಆ ಬಗ್ಗೆ ಆಕರ್ಷಿತರಾಗಿ ಆನ್‌ಲೈನ್ ಟ್ರೇಡಿಂಗ್ ಮಾಡುವ ಉದ್ದೇಶದಿಂದ ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ, ವಿಳಾಸ ನೋಂದಾಯಿಸಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಮೊಬೈಲ್ ಗೆ ಕರೆ ಬಂದಿದ್ದು, ತನ್ನ ಹೆಸರು ಮೀನಾಕ್ಷಿ ಎಂದು ಪರಿಚಯ ಮಾಡಿಕೊಂಡು ಟ್ರೇಡಿಂಗ್ ಬಗ್ಗೆ ತಿಳಿಸಿದ್ದಾಳೆ. ಆಕೆಯ ಸೂಚನೆಯಂತೆ 21,000 ರೂ.ವನ್ನು ಆಕೆ ತಿಳಿಸಿದ ಬ್ಯಾಂಕ್ ಖಾತೆಗೆ ವರ್ಗಾಹಿಸಿದ್ದಾರೆ.

ಆಕೆ ವಾಟ್ಸಪ್ ನಲ್ಲಿ ಕಳುಹಿಸಿದ ಲಿಂಕ್‌ನ್ನು ತೆರೆದು ಮಾಡಿ ಅದರಲ್ಲಿ ಮಾಹಿತಿ ದಾಖಲಾತಿ ಮಾಡಿದ್ದಾರೆ. ಡಿ.15ರಂದು ಅಕ್ಷರಗೌಡ ಎನ್ನುವ ಹೆಸರಿನ ಯುವತಿ ಆನಂದ ಉನ್ನಿಕೃಷ್ಣ ಎನ್ನುವವರ ಅಸಿಸ್ಟೆಂಟ್ ಎಂದು ಹೇಳಿಕೊಂಡು ಕರೆ ಮಾಡಿದ, ಟ್ರೇಡ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಹೆಚ್ಚಿನ ಹಣವನ್ನು ಲಾಭವಾಗಿ ಪಡೆಯಬಹುದು ಎಂದು ತಿಳಿಸಿದ್ದಾಳೆ. ಆಕೆಯ ನಿರ್ದೇಶನದಂತೆ ದೂರುದಾರರು ಡಿ.18ರಿಂದ ಹಂತಹಂತವಾಗಿ ಒಟ್ಟು 18,81,000 ರೂ. ವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ದೂರುದಾರರಿಗೆ ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಲಾಭವಾಗಿ ನೀಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿದ್ದಾರೆ. ಬಳಿಕ ಇದೊಂದು ವಂಚನಾ ಜಾಲ ಎಂದು ಅರಿವಾಗಿ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

06/05/2026 11:18 am

Cinque Terre

1.77 K

Cinque Terre

0