ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಾದಕದ್ರವ್ಯ ಸೇವಿಸಿರುವ ಆರೋಪಿ ಅರೆಸ್ಟ್

ಮಂಗಳೂರು: ಮಾದಕದ್ರವ್ಯ ಸೇವನೆ ಮಾಡಿರುವ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಬಂಧಿತ ಆರೋಪಿ.

ಮೇ 5ರಂದು ವಿಟ್ಲ ಠಾಣಾ ಪೊಲೀಸರು ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೆಲ್ಮೆಟ್ ಧರಿಸದೆ ಸ್ಕೂಟರ್‌ ಚಲಾಯಿಸಿಕೊಂಡು ಮಹಮ್ಮದ್ ಅಸ್ಬೀರ್ ಬಂದಿದ್ದಾನೆ. ಆತನನ್ನು ತಡೆದು ನಿಲ್ಲಿಸಿದಾಗ, ಆರೋಪಿಯು ಉಪ ನಿರೀಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ. ಈ ವರ್ತನೆಯಿಂದ ಮಹಮ್ಮದ್ ಅಸ್ಬೀರ್ ಮಾದಕದ್ರವ್ಯ ಸೇವಿಸಿರುವ ಬಗ್ಗೆ ಸಂಶಯಗೊಂಡು ವಿಚಾರಿಸಿದಾಗ, ಆತ ತಾನು ಮಾದಕವಸ್ತು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ತಕ್ಷಣ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿ ಮಾದಕವಸ್ತು ಸೇವನೆ ದೃಢಪಟ್ಟಿರುತ್ತದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Edited By : Abhishek Kamoji
Kshetra Samachara

Kshetra Samachara

05/05/2026 09:46 pm

Cinque Terre

3.83 K

Cinque Terre

0