ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈತುಂಬಾ ಸಂಬಳವಿದ್ದರೂ ಜೊತೆಗಿಲ್ಲ ಒಬ್ಬ ಗೆಳೆಯ…ಗಂಟೆಗೆ 600 ರೂ. ನೀಡಿ, ಒಬ್ಬ ಗೆಳೆಯನನ್ನು ಮನೆಗೆ ಕರೆತನ್ನಿ!

ಬೆಂಗಳೂರು : ಇಂದು ನಮ್ಮ ಸುತ್ತಮುತ್ತ ಜನಜಂಗುಳಿ ಇದೆ, ಕೈಯಲ್ಲಿ ಸ್ಮಾರ್ಟ್‌ಫೋನ್ ಇದೆ, ಇಂಟರ್ನೆಟ್‌ನಲ್ಲಿ ಸಾವಿರಾರು ಫ್ರೆಂಡ್ಸ್ ಇದ್ದಾರೆ. ಆದರೆ, ಇಷ್ಟೆಲ್ಲಾ ಇದ್ದರೂ ಒಳಮನಸ್ಸಿನಲ್ಲಿ ಒಂದು ರೀತಿಯ ಶೂನ್ಯ ಭಾವನೆ. ಅದೇ ಒಂಟಿತನ ಭಾರತದಲ್ಲಿ ಇಂದು 95 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರಿದ್ದಾರೆ, ಆದರೆ ಭಾವನಾತ್ಮಕವಾಗಿ ನಾವೆಲ್ಲರೂ ಒಬ್ಬರಿಗೊಬ್ಬರು ದೂರವಾಗುತ್ತಿದ್ದೇವೆಯೇ?

ಉದ್ಯೋಗಕ್ಕಾಗಿ ಬೇರೆ ನಗರಗಳಿಗೆ ವಲಸೆ ಹೋಗುವುದು, ಕೆಲಸದ ಒತ್ತಡ ಮತ್ತು ವಿಭಕ್ತ ಕುಟುಂಬಗಳ ಹೆಚ್ಚಳ ಈ ಒಂಟಿತನಕ್ಕೆ ಮುಖ್ಯ ಕಾರಣ. ಇದು ಕೇವಲ ಮಾನಸಿಕ ಬೇಸರವಲ್ಲ; ಇದು ನಿದ್ರಾಹೀನತೆ, ಹೃದ್ರೋಗ ಮತ್ತು ಅಲ್ಝೈಮರ್‌ನಂತಹ ಗಂಭೀರ ಕಾಯಿಲೆಗಳಿಗೆ ದಾರಿಯಾಗುತ್ತಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ . ಈ ಸಮಸ್ಯೆಗೆ ಪರಿಹಾರವಾಗಿ ಈಗ ಮಾರುಕಟ್ಟೆಗೆ

GetCompanion ನಂತಹ ಸ್ಟಾರ್ಟ್‌ಅಪ್‌ಗಳು ಬಂದಿವೆ. ಇಲ್ಲಿ ನೀವು ಗಂಟೆಗೆ 600 ರಿಂದ 2,000 ರೂಪಾಯಿ ನೀಡಿ ಒಬ್ಬ ಗೆಳೆಯನನ್ನು ಬಾಡಿಗೆಗೆ ಪಡೆಯಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?

ಇದು ಡೇಟಿಂಗ್ ಅಲ್ಲ, ಕೇವಲ ಸ್ನೇಹ ಮತ್ತು ಸಾಂಗತ್ಯಕ್ಕೆ ಮಾತ್ರ ಸೀಮಿತ.ನಿಮ್ಮ ಜೊತೆ ವಾಕಿಂಗ್ ಬರಲು, ವಿಡಿಯೋ ಗೇಮ್ ಆಡಲು ಅಥವಾ ಮನಬಿಚ್ಚಿ ಮಾತನಾಡಲು ಇವರು ಜೊತೆಯಾಗುತ್ತಾರೆ.

ವಯಸ್ಸಾದವರಿಗೆ ಪುಸ್ತಕ ಓದಿಕೊಡಲು ಅಥವಾ ಆಸ್ಪತ್ರೆಗೆ ಕರೆದೊಯ್ಯಲು ಸಹ ಈ ಸೇವೆಯನ್ನು ಬಳಸಬಹುದು.ಇಲ್ಲಿ ಕಟ್ಟುನಿಟ್ಟಾದ ನಿಯಮಗಳಿವೆ. ಯಾವುದೇ ಅನೈತಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ. ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲನೆ ಮತ್ತು ಸೈಕೋಮೆಟ್ರಿಕ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಮಹಿಳಾ ಸಿಬ್ಬಂದಿಗಳ ಸುರಕ್ಷತೆಗಾಗಿ ವಿಶೇಷ ಪ್ರೋಟೋಕಾಲ್‌ಗಳೂ ಇವೆ.

ದುಡ್ಡು ಕೊಟ್ಟು ಗೆಳೆಯರನ್ನು ಪಡೆಯುವ ಈ ಸಂಸ್ಕೃತಿ ಕೇಳಲು ವಿಚಿತ್ರ ಅನಿಸಬಹುದು. ಆದರೆ, ಇದು ನಮ್ಮ ಇಂದಿನ ಕಟು ವಾಸ್ತವ. ಡಿಜಿಟಲ್ ಯುಗದಲ್ಲಿ ನಮಗೆ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ, ನಮ್ಮ ಮಾತನ್ನು ಆಲಿಸುವ ಒಬ್ಬ ಮನುಷ್ಯನ ಸಾಂಗತ್ಯ ಬೇಕಿದೆ. ಮುಂದಿನ ದಿನಗಳಲ್ಲಿ ಇದು ನಮ್ಮ ಜೀವನಶೈಲಿಯ ಅನಿವಾರ್ಯ ಭಾಗವಾದರೂ ಆಶ್ಚರ್ಯವಿಲ್ಲ.ಸಂಪರ್ಕದಲ್ಲೂ ದೂರವಿರುವ ಈ ಜಗತ್ತಿನಲ್ಲಿ, ನೈಜ ಸಂಬಂಧಗಳಿಗೂ ಸ್ವಲ್ಪ ಸಮಯ ಮೀಸಲಿಡೋಣ.

Edited By : Vijay Kumar
PublicNext

PublicNext

05/05/2026 02:30 pm

Cinque Terre

10.04 K

Cinque Terre

1