ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನದಿಯಲ್ಲಿ ನಾಪತ್ತೆಯಾಗಿದ್ದ ಉದ್ಯಮಿ 15 ಅಡಿ ಮೊಸಳೆಯ ಹೊಟ್ಟೆಯಲ್ಲಿ ಪತ್ತೆ! ಕರುಳು ಹಿಂಡುವ ಸತ್ಯ ವೈರಲ್

ದಕ್ಷಿಣ ಆಫ್ರಿಕಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಾಪತ್ತೆಯಾಗಿದ್ದ 59 ವರ್ಷದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಅವರನ್ನು ತಿಂದಿರಬಹುದು ಎಂದು ಶಂಕಿಸಲಾದ ಬರೋಬ್ಬರಿ 15 ಅಡಿ ಉದ್ದದ ಬೃಹತ್ ಮೊಸಳೆಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಬಳಿಕ ಅದನ್ನು ಹೆಲಿಕಾಪ್ಟರ್ ಮೂಲಕ ನೀರಿನಿಂದ ಹೊರಕ್ಕೆ ಏರ್‌ಲಿಫ್ಟ್ ಮಾಡಲಾಗಿದ್ದು, ಈ ಬೃಹತ್ ಮೊಸಳೆಯ ಹೊಟ್ಟೆಯಲ್ಲಿ ಮನುಷ್ಯನ ದೇಹದ ಭಾಗಗಳು ಪತ್ತೆಯಾಗಿವೆ.

ಕೇಪ್ಟೌನ್‌ನ ಕೊಮಟಿ ನದಿಯ ಬಳಿ ಮೇ 2, 2026 ರಂದು ಈ ರೋಚಕ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಸುಮಾರು 4.5 ಮೀಟರ್ ಉದ್ದದ ಮತ್ತು 500 ಕೆಜಿ ತೂಕದ ಈ ದೈತ್ಯ ಮೊಸಳೆಯನ್ನು ಸೆರೆಹಿಡಿದು ಗುಂಡಿಕ್ಕಿ ಕೊಲ್ಲಲಾಯಿತು. ನಂತರ ಕ್ಯಾಪ್ಟನ್ ಜೋಹಾನ್ ಪೋಟ್ಗೈಟರ್ ಅವರು ಹೆಲಿಕಾಪ್ಟರ್‌ನಿಂದ ನದಿಗೆ ಇಳಿದು, ಹಗ್ಗಗಳ ಸಹಾಯದಿಂದ ಮೊಸಳೆಯನ್ನು ಕಟ್ಟಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಾಗಿಸಿದರು.

ಗೌಟೆಂಗ್‌ನ ವಂಡರ್‌ಬೈಲ್‌ಪಾರ್ಕ್‌ನ 59 ವರ್ಷದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಅವರು ಏಪ್ರಿಲ್ 28, 2026 ರಂದು ನಾಪತ್ತೆಯಾಗಿದ್ದರು. ಭಾರಿ ಮಳೆಯಿಂದಾಗಿ ಕೊಮಟಿಪೂರ್ಟ್ ಬಳಿಯ ಸೇತುವೆಯ ಮೇಲೆ ಅವರ ಕಾರು ನೀರಿನಲ್ಲಿ ಕೊಚ್ಚಿಹೋಗಿತ್ತು. ಅಂದಿನಿಂದ ಅವರ ಸುಳಿವು ಇರಲಿಲ್ಲ. ಪೊಲೀಸರು ಡ್ರೋನ್ ಮತ್ತು ಹೆಲಿಕಾಪ್ಟರ್‌ಗಳ ಮೂಲಕ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದರು. ಈ ಶೋಧದ ವೇಳೆ, ಕೊಮಟಿ ನದಿಯಲ್ಲಿ ಅಸಹಜವಾಗಿ ಉಬ್ಬಿದ ಹೊಟ್ಟೆಯನ್ನು ಹೊಂದಿದ್ದ ಈ ಬೃಹತ್ ಮೊಸಳೆ ಅಧಿಕಾರಿಗಳ ಕಣ್ಣಿಗೆ ಬಿದ್ದಿತ್ತು.

ಇನ್ನೂ ಮೊಸಳೆಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಾಗಿಸಿ ಪರೀಕ್ಷಿಸಿದಾಗ, ಅದರ ಹೊಟ್ಟೆಯಲ್ಲಿ ಮನುಷ್ಯನ ಪಕ್ಕೆಲುಬುಗಳು, ಎರಡು ಕೈಗಳು ಮತ್ತು ಎದೆಯ ಭಾಗದ ಮಾಂಸ ಪತ್ತೆಯಾಗಿವೆ. ಇದರೊಂದಿಗೆ ಬಟ್ಟೆ ಮತ್ತು ಒಂದು ಉಂಗುರ ಕೂಡ ಸಿಕ್ಕಿವೆ. ಈ ದೇಹದ ಭಾಗಗಳು ನಾಪತ್ತೆಯಾಗಿದ್ದ ಉದ್ಯಮಿ ಗೇಬ್ರಿಯಲ್ ಬಟಿಸ್ಟಾ ಅವರದ್ದೇ ಎಂದು ಶಂಕಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು DNA ಪರೀಕ್ಷೆ ನಡೆಸಲಾಗುತ್ತಿದೆ.

ಬಟಿಸ್ಟಾ ಅವರು ಬದುಕಿದ್ದಾಗಲೇ ಮೊಸಳೆ ದಾಳಿ ಮಾಡಿತ್ತೇ ಅಥವಾ ನೀರಿನಲ್ಲಿ ಮುಳುಗಿ ಮೃತಪಟ್ಟ ನಂತರ ಮೊಸಳೆ ಅವರ ದೇಹವನ್ನು ತಿಂದಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

05/05/2026 04:13 pm

Cinque Terre

21.44 K

Cinque Terre

0

ಸಂಬಂಧಿತ ಸುದ್ದಿ